ಕರಾವಳಿ

ಹುಲಿಗುಡ್ಡದಲ್ಲಿ ಬೋನಿಗೆ ಬಿದ್ದ ಗಂಡು ಚಿರತೆ!

Pinterest LinkedIn Tumblr

ಕುಂದಾಪುರ: ಶಂಕರನಾರಾಯಣ ಗ್ರಾಮದ ಹುಲಿಗುಡ್ಡ ಎಂಬಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.

ಚಂದ್ರಶೇಖರ ಶೆಟ್ಟಿ ಅವರ ದೈವದ ಮನೆ ಸಮೀಪ ಬೆಳಗಿನ ಜಾವ ಸುಮಾರು 5 ಗಂಟೆಗೆ ಆರರಿಂದ ಏಳು ವರ್ಷ ಪ್ರಾಯದ ಗಂಡು ಚಿರತೆ ಬೋನಿಗೆ ಬಿದ್ದಿದ್ದು ಅರಣ್ಯ ಇಲಾಖೆಯವರು ಚಿರತೆಯನ್ನು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಎ.ಎ. ಗೋಪಾಲ್‌, ಉಪ ವಲಯಾರಣ್ಯಾಧಿಕಾರಿ ಹರೀಶ್‌ ಕೆ., ಅರಣ್ಯ ರಕ್ಷಕ ಗುರುರಾಜ್‌ ಎಸ್‌.ನಾಯಕ್‌, ಶಿವು ಎಸ್‌. ವೇಷಗಾರ, ಪ್ರ.ದರ್ಜೆ ಸಹಾಯಕ ಸತೀಶ್‌ ಕುಮಾರ್‌ ಭಾಗವಹಿಸಿದ್ದರು.

Comments are closed.