
ಬೆಂಗಳೂರು/ಮೈಸೂರು: ಭೂಗತ ಪಾತಕಿ ರವಿ ಪೂಜಾರಿ ಬಂಧನ ಸಮ್ಮಿಶ್ರ ಸರ್ಕಾರದ ಯಶಸ್ಸು ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ತಿರಗೇಟು ನೀಡಿರುವ ಬಿಜೆಪಿ ಅಣ್ಣಾ ಕುಮಾರಣ್ಣ ರವಿ ಪೂಜಾರಿಯನ್ನು ಬಂಧಿಸಿದ್ದು ಸಮ್ಮಿಶ್ರ ಸರ್ಕಾರದ ಸಾಧನೆ ಎಂದು ಕೀರ್ತಿ ಪಡೆಯುವ ಮೊದಲ ಕಂಪ್ಲಿ ಶಾಸಕ ಗಣೇಶರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ ಎಂದು ಸವಾಲು ಹಾಕಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಕೂಡಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಈಗಾಗಲೇ ಶಾಸಕ ಗಣೇಶ್ ಬಂಧನಕ್ಕೆ ಸೂಚನೆ ನೀಡಿದ್ದೇನೆ. ಆದರೆ ಪಾತಕಿ ರವಿ ಪೂಜಾರಿ ತಲೆಮರೆಸಿಕೊಂಡು 15 ವರ್ಷ ಕಳೆದಿದೆ. ಈ ವೇಳೆ ಬಿಜೆಪಿಯವರು ಕೂಡಾ ಐದು ವರ್ಷ ಆಡಳಿತ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯವರು ಯಾಕೆ ರವಿ ಪೂಜಾರಿಯನ್ನು ಬಂಧಿಸಿಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಪ್ರಶ್ನಿಸಿದ್ದಾರೆ.
ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಆ ಬಗ್ಗೆ ಬಿಜೆಪಿಯವರಿಗೆ ಅನುಮಾನ ಬೇಡ. ನಾನು ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆ ಇಲ್ಲ. ಟ್ವೀಟ್ ನಲ್ಲಿ ಅಣ್ಣಾ ಎಂದು ಕರೆದಿರುವುದಕ್ಕೆ ಧನ್ಯವಾದ ಅರ್ಪಿಸಿದ ಕುಮಾರಸ್ವಾಮಿ, ಬಿಜೆಪಿಯವರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಕೊಡುವುದಾಗಿ ತಿಳಿಸಿದ್ದಾರೆ.
Comments are closed.