ಬೆಂಗಳೂರು: ವಕೀಲೆಯೋರ್ವರ ಮೇಲೆ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಅಶೋಕನಗರದಲ್ಲಿ ನಡೆದಿದೆ.

ವಕೀಲೆ ಕಾರ್ಯ ನಿಮಿತ್ತ ತಡರಾತ್ರಿವರೆಗೂ ಖಾಸಗಿ ಅಪಾರ್ಟಮೆಂಟಿನಲ್ಲಿರುವ ತಮ್ಮ ಕಚೇರಿಯಲ್ಲಿ ಉಳಿದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕಚೇರಿಯಿಂದ ಹೊರಟು ಪಾರ್ಕಿಂಗ್‍ಗೆ ಬಂದು ಲೈಟ್ಸ್ ಆಫ್ ಮಾಡಿದ್ದಾನೆ. ಬಳಿಕ ಸೆಕ್ಯೂರಿಟಿ ಗಾರ್ಡ್ ವಕೀಲೆಯ ಮೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಸೆಕ್ಯೂರಿಟಿ ಗಾರ್ಡ್ ಮೈ ಮುಟ್ಟುತ್ತಿದ್ದಂತೆ ವಕೀಲೆ ಭಯದಿಂದ ಕೂಗಿದ್ದು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳು ಆಗಮಿಸುವ ಭಯದಿಂದ ಸೆಕ್ಯೂರಿಟಿ ಗಾರ್ಡ್ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆಕ್ಯೂರಿಟಿ ಗಾರ್ಡ್ ನನ್ನು ಹುಡುಕುತ್ತಿದ್ದಾರೆ.
Comments are closed.