ರಾಷ್ಟ್ರೀಯ

ವಿಶ್ವದ ಅತ್ಯಂತ ಎತ್ತರದ ಲಡಾಖ್ ನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ!

Pinterest LinkedIn Tumblr

ನವದೆಹಲಿ ಜ.26 : ದೇಶಾದ್ಯಂತ 70ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಇಂಡೋ- ಟಿಬೆಟಿಯನ್​ ಗಡಿಯಲ್ಲೂ ಭಾರತೀಯ ಸೇನೆಯ ಯೋಧರು ಮೈನಸ್​ 30 ಡಿಗ್ರಿ ತಾಪಮಾನದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿ ಗಳಿಸಿರುವ ಲಡಾಖ್ ನಲ್ಲಿ ಯೋಧರು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ 70ನೇ ಗಣರಾಜ್ಯೋತ್ಸವವನ್ನು ಆಚರಿಸಿದರು.

ಸಮುದ್ರ ಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರದ ಲಡಾಖ್ ಯುದ್ಧ ಭೂಮಿಯಲ್ಲಿ, ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಧ್ವಜಾರೋಹಣ ಮಾಡಿದರು.

Comments are closed.