ನವದೆಹಲಿ: ಬಹುನಿರೀಕ್ಷಿತ ಭಾರತ ರತ್ನ ಪ್ರಶಸ್ತಿ ಪಟ್ಟಿಯನ್ನು ಕೇಂದ್ರ ಬಿಡುಗಡೆ ಮಾಡಿದ್ದು, ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳಿಗೆ ಈ ಬಾರಿಯೂ ನೀಡಿಲ್ಲ. ಸಿದ್ದಗಂಗಾ ಶ್ರೀಗಳ ಆರೋಗ್ಯ ಹದಗೆಟ್ಟ ದಿನದಿಂದಲೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿತ್ತು. ನ್ಯೂಸ್ 18 ಕನ್ನಡ ಕೂಡ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೋರಿ ಕ್ಯಾಂಪೇನ್ ಆರಂಭಿಸಿತ್ತು.
ಲಕ್ಷಾಂತರ ಭಕ್ತರ ಆಶಯವೂ ಆಗಿತ್ತು. ಜತೆಗೆ ಶ್ರೀಗಳು ದಶಕಗಳಿಂದ ಮಾಡಿಕೊಂಡು ಬಂದ ನಿಸ್ವಾರ್ಥ ಸೇವೆಗೆ ದೇಶದ ಅತ್ಯುನ್ನತ ಪ್ರಶಸ್ತಿ ಸಿಗಬೇಕು ಎಂಬ ಆಶಯ ಎಲ್ಲರದಾಗಿತ್ತು. ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕವಾಗಿ ಈ ಬೇಡಿಕೆ ಕೇಳಿ ಬರುತ್ತಲೇ ಇದೆ.
ಯಾರಿಗೆ ಈ ಬಾರಿ ಪ್ರಶಸ್ತಿ:
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತರತ್ನ ನಾನಾಜಿ ದೇಶ್ಮುಖ್ಗೆ ಮರಣೋತ್ತರ ಭಾರತರತ್ನ, ಭೂಪೇನ್ ಹಜಾರಿಕಾಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಘೋಷಿಸಿದೆ. ನಾನಾಜಿ ದೇಶ್ಮುಖ್ ಸಮಾಜ ಸುಧಾರಕರು. ದಶಕಗಳ ಕಾಲ ದೇಶಕ್ಕಾಗಿ ಶ್ರಮಿಸಿದ್ದವರು. ಭೂಪೇನ್ ಹಜಾರಿಕಾ ಪ್ರಸಿದ್ಧ ಗಾಯಕರಾಗಿದ್ದವರು. ಅವರ ಹಾಡುಗಳು ಇಂದಿಗೂ ಜನಜನಿತ.
Comments are closed.