ಕರ್ನಾಟಕ

ಸಿದ್ದಗಂಗಾ ಮಠದ ಮಠದ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಶ್ರೀಗಳು ಪದಗ್ರಹಣ

Pinterest LinkedIn Tumblr


ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಮೂರು ದಿನಗಳು ಕಳೆದವು. ತ್ರಿವಿಧ ದಾಸೋಹದ ಮೂಲಕ ದೇಶದ ತುಂಬೆಲ್ಲ ಮನೆಮಾತಾಗಿದ್ದ ಶಿವಕುಮಾರ ಸ್ವಾಮೀಜಿ ಇನ್ನು ನೆನಪು ಮಾತ್ರ. ಅವರ ನಂತರ ಮಠದ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಶ್ರೀಗಳು ಪದಗ್ರಹಣ ಮಾಡಿದ್ದಾರೆ. ಅವರೊಂದಿಗೆ ಸಂದರ್ಶನದಲ್ಲಿ ಅವರು ಸಿದ್ದಗಂಗಾ ಸ್ವಾಮೀಜಿ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿದ್ಧಲಿಂಗ ಶ್ರೀಗಳ ಹೇಳಿದಂತೆ…

ಶ್ರೀಗಳು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗಲ್ಲ. ಅವರ ಅಗಲಿಕೆಯ ನೋವು ಇದ್ದರೂ ಕೂಡ ಮನಸ್ಸಿನಲ್ಲಿ ನುಂಗಿಕೊಂಡು ಅವರ ಆಶೀರ್ವಾದ ಶ್ರೀರಕ್ಷೆ ನಮ್ಮ ಮೇಲಿದೆ. ಅವರು ನಮ್ಮ ಮೇಲೆ ಇಟ್ಟ ನಂಬಿಕೆಯಂತೆ, ಅವರು ನಡೆಸಿದ ಎಲ್ಲಾ ಕಾರ್ಯಗಳನ್ನ ಮುನ್ನಡೆಸುತ್ತೇನೆ. ಶ್ರೀಮಠದ ಗದ್ದುಗೆಯಲ್ಲಿ ಕೆಲವು ಕಾಲ ಕುಳಿತು ಜನರಿಗೆ ದರ್ಶನ ನೀಡುತ್ತಿದ್ದರು. ಶಿವಯೋಗಿ ಮಠ ಅತ್ಯಂತ ಪ್ರಿಯ.

ಅವರು ನನಗೆ ಮಾರ್ಗದರ್ಶನ ನೀಡಿದ್ದಾರೆ. ಮೂರು ವರ್ಷಗಳ ಕಾಲದಲ್ಲಿ ನನಗೆ ಒಳ್ಳೆಯ ಅನುಭವ ಆಗಿದೆ. ಯಾರೇ ಮಠಕ್ಕೆ ಬಂದರೂ ಪ್ರಸಾದ ವ್ಯವಸ್ಥೆ ಆಗಿದೆಯಾ ಎಂದು ಕೇಳುತ್ತಿದ್ದರು. ಐಸಿಯೂನಲ್ಲಿದ್ದರೂ ಕೂಡ ಪ್ರಸಾದ ಆಯ್ತಾ ಅಂತಾ ಕೇಳುತ್ತಿದ್ದರು. ಮಠವನ್ನು ನಡೆಸಿಕೊಂಡು ಹೋಗಿ ಧೈರ್ಯಗೆಡಬೇಡಿ. ಮಠ ನಡೆಸಲು ಯಾವುದೇ ತೊಂದರೆ ಇಲ್ಲಾ ಎನ್ನುತ್ತಿದ್ದರು. ಶ್ರೀಗಳು ಯಾವುದನ್ನೂ ಬೇಕು ಅಂತಾ ಬಯಸಿದವರಲ್ಲಾ. ಅವರ ಪ್ರತಿಯೊಂದು ಕಾಯಕ ನಮಗೆ ಇಷ್ಟವಾದದ್ದು. ಶಿಸ್ತುಬದ್ಧ ಜೀವನ, ನಿಯಮಿತ ಆಹಾರ ಅವರ ಜೀವನ ಪದ್ದತಿ. ಅವರು ನಡೆದ ದಾರಿ ಸವಾಲು. ಅದೊಂದು ಕಠಿಣ ದಾರಿಯಲ್ಲಿ ಬೆಳೆದು ಸಾಧನೆ ಮಾಡಿದರು. ಅವರಂತೆ ಎಲ್ಲವನ್ನೂ ಆಚರಿಸಲು ನನಗೆ ಸಾಧ್ಯವಿಲ್ಲಾ. ಸಾಕಷ್ಟು ಪ್ರಯತ್ನಿಸುವೆ. ನನಗೆ ನಿರೀಕ್ಷೆ ಅಲ್ಲಾ ಇದೊಂದು ಪರೀಕ್ಷೆ. ಎಲ್ಲವನ್ನೂ ಬೆಳೆಸಿ ಎತ್ತರಕ್ಕೆ ಬೆಳೆಸಿ ಕಟ್ಟಿದ್ದಾರೆ. ಇದು ನನ್ನ ಮೊದಲ ಆದ್ಯತೆ. ಅವಶ್ಯಕತೆ ಅಥವಾ ಸಮಯ ಬಂದಾಗ ಆಯಾ ಕೆಲಸ ಮಾಡುವೆ. ಎಂತಹ ಕಷ್ಟಕರ ಸಮಯ ಬಂದಾಗಲೂ ಆಚರಣೆಗೆ ಧಕ್ಕೆ ತರಲಿಲ್ಲ.

ಚೆನ್ನೈನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ನನಗೆ ಒಂದು ನಿರೀಕ್ಷೆ ಇತ್ತು, ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೇ ಅಂತಾ ನನಗೆ ಅನ್ನಿಸಿತು. ಪೂಜ್ಯರಿಗೆ ಇಷ್ಟ ಇಲ್ಲದಿದ್ದರೂ ನಾನು ಅಲ್ಲಿಗೆ ಕರೆದುಕೊಂಡು ಹೋಗಿ, ಅವರು ಹಲವು ವರ್ಷ ಇರಬೇಕು ಅಂತಾ ಬಯಸಿದ್ದೆವು. ಅವರು ಸುಮ್ಮನೆ ಇದ್ದರೂ ಸಾಕು ದೊಡ್ಡ ಆಲದಮರ ಇದ್ದಂತೆ ಅನ್ನಿಸಿತು. ನಮಗೆ ಆಸ್ಪತ್ರೆಗೆ ಹೋದ ಆ ಸಂದರ್ಭದಲ್ಲಿ ಆತಂಕ, ಭಯ ಎಲ್ಲವೂ ಇತ್ತು, ಅವರಿಗೆ ಇಷ್ಟವಿಲ್ಲದಿದ್ದರೂ ನಾನು ಒಪ್ಪಿಸಿ ಕರೆದುಕೊಂಡು ಹೋಗಿದ್ದೆ. ಅವರ ನೆರಳಿನಲ್ಲಿದ್ದು ಮೂರು‌ ವರ್ಷಗಳಿಂದ ನಾನು ಮಠದ ಜವಾಬ್ದಾರಿಯನ್ನು ನಡೆಸಿಕೊಂಡು ಬಂದ ಅನುಭವ ಇದೆ. ಅಂತ್ಯಕ್ರಿಯೆ ಸಮಯದಲ್ಲಿ ಪೇಟ ಧಾರಣೆ ಅಧಿಕಾರ ಹಸ್ತಾಂತರ ಸಂದರ್ಭ ಕಣ್ಣಿನಲ್ಲಿ ನೀರು ತುಂಬಿತ್ತು. ಆದರೆ ಅನಿವಾರ್ಯದಿಂದಾಗಿ ಅಂತ್ಯಕ್ರಿಯೆ ಮಾಡಬೇಕಾಯಿತು.

ಮರಣವೇ ಮಹಾನಂದಿ ಎಂದು ಅಮತಾ ಶರಣರು ಹೇಳುತ್ತಾರೆ. ಅವರು ಹತ್ತು ವರ್ಷಗಳಿಂದ ಹೇಳಿದ್ದು ಪದೇ ಪದೇ ನಾನು ಹಣ್ಣಾಗಿದ್ದೇನೆ ಎಂದು ಹೇಳುತ್ತಿದ್ದರು. ನಾನು ದೀರ್ಘವಾಗಿ ಬದುಕಿದ್ದು ಹೆಚ್ಚು ಬದುಕಿದ್ದೇನೆ ಎನ್ನುತ್ತಿದ್ದರು. ಮರಣಕ್ಕೆ ಅವರು ಹೆದರಲಿಲ್ಲ, ಮರಣವನ್ನು ಸ್ವಾಗತಿಸುತ್ತಿದ್ದರು. ಇಚ್ಚಾಮರಣಿ ಎಂಬ ವಿಷಯವನ್ನು ನಾವು ಹೇಳಲು ಸಾಧ್ಯವಿಲ್ಲ, ಸಾವು ಯಾವಾಗ ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರನ್ನು ಇನ್ನೂ ಉಳಿಸಿಕೊಳ್ಳಬೇಕು ಎಂಬ ಆಸೆ ಇನ್ನೂ ಹೋಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಒಂದು ಹೆಣ್ಣು ಮಗುವಿಗೆ ಭೂತ ಚೇಷ್ಟೆ ಇತ್ತು. ಆ ಮಗು ಅಂತಹ ಆಹಾರ ಬೇಕು ಇಂತಹ ಆಹಾರ ಬೇಕು ಅಂತಾ ಕೇಳುತ್ತಿತ್ತು. ಆ ಮಗು ಸಸ್ಯಾಹಾರಿ ಆದರೆ, ಮಾಂಸಾಹಾರಿ ಕೇಳುತ್ತಿತ್ತು. ಆಗ ಸ್ವಾಮೀಜಿ ತಾಯತ ಕಟ್ಟಿದ ಕೇವಲ 5 ನಿಮಿಷಕ್ಕೆ ಎಲ್ಲವೂ ಸರಿಯಾಯಿತು.

ನಮ್ಮ ಮಠ ಜೋಳಿಗೆಯಿಂದ ಭಿಕ್ಷಾಟನೆಯಿಂದ ಬೆಳೆದಿದೆ. ಗುರುಗಳು ಕೊಟ್ಟ ಜೋಳಿಗೆಯಿಂದಲೇ ನಮ್ಮ ಮಠ ಬೆಳೆದಿದೆ. ರೈತಾಪಿ ವರ್ಗ ಸಹಕಾರ ಕೊಟ್ಟಿದ್ದರಿಂದ ಮಠ ಈ ಎತ್ತರಕ್ಕೆ ಬೆಳೆದಿದೆ. ನಾನು ಕಂಡ ಹಾಗೆ ದಿನನಿತ್ಯ ರಾತ್ರಿ 11 ಕ್ಕೆ ಮಲಗಿದ್ರೆ ಬೆಳಿಗ್ಗೆ 2.30 ಕ್ಕೆ ಎದ್ದೇಳುತ್ತಿದ್ದರು. ನಾನು ವಿದ್ಯಾಭ್ಯಾಸಕ್ಕಾಗಿ‌ಅವರ ಸೇವೆಗಾಗಿ ಬಂದವನು. ಅವರ ಕೃಪೆಯಿಂದ ನಾನು ಈಗ ಮಠದ ಸ್ವಾಮೀಜಿಯಾಗಿದ್ದೇನೆ. ಕೆಲವು ಸಮಯ ಸ್ವಾಮಿಗಳು ಯಾಕೆ ಹೀಗೆ ಮಾಡುತ್ತಾರೆ ಅಂತಾ ಹೇಳುತ್ತಿದ್ದರು.

ಗದ್ದುಗೆ ಕಟ್ಟಡಕ್ಕೆ ಕಳೆದ 35 ವರ್ಷಗಳ ಹಿಂದೆಯೇ ಅಡಿಪಾಯ ಹಾಕಿದ್ದರು. ಇದು ಬೇಕೇ ಬೇಕು ಅಂತಾ 35 ವರ್ಷಗಳ ಹಿಂದೆ ಆಗಲೇ ಗದ್ದಿಗೆ ನಿರ್ಮಾಣಕ್ಕೆ ಮುಂದಾಗಿದ್ರು. ಎಷ್ಟೋ ವರ್ಷಗಳ ಹಿಂದೆ ಓದಿದ್ದನ್ನು ಈಗಲೂ ನೆನಪಿಸುತ್ತಿದ್ದರು. ಅಷ್ಟೊಂದು ಸ್ಮರಣಾಶಕ್ತಿ ಇತ್ತು. ಹಳೆಯ ವಿದ್ಯಾರ್ಥಿಗಳು ಸ್ವಾಮೀಜಿಯನ್ನು ತಂದೆ- ತಾಯಿಗಿಂತ ಹೆಚ್ಚಿನ ರೀತಿ ಕಾಣುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳೂ ಅಚ್ಚುಮೆಚ್ಚು. ರೇವಣ್ಣಸಿದ್ದಯ್ಯರನ್ನು ಇವನು ವಿದ್ಯಾರ್ಥಿಯಾಗಿದ್ದಾಗ ಚೆನ್ನಾಗಿ ಓದುತ್ತಿದ್ದ ಅಂತಾ ಹೇಳುತ್ತಿದ್ದರು. ಚನ್ನಬಸಪ್ಪ, ಗೋವಿಂದರಾಜು ಅವರನ್ನು ಗುರುತಿಸಿ ಮಾತನಾಡುತ್ತಿದ್ದರು. ಜೋಳಿಗೆ ಯಾವಾಗಲೂ ನಮ್ಮ ಕೈಲಿದೆ ಅಂತಾ ತಿಳಿದುಕೊಳ್ಳಬೇಕು. ಜೋಳಿಗೆ ನಮ್ಮ ಜೀವಾಳ. ಕೆಲ ದಿನಗಳಿಂದ ಶೂನ್ಯ ಆವರಿಸಿದ್ದು, ಅನಾಥಪ್ರಜ್ಞೆ ಕಾಡುತ್ತಿದೆ.

ಕೆಲವು ಸಂದರ್ಭಗಳಲ್ಲಿ ದುಃಖ ಮರೆತು ಕೆಲಸ ಮುಂದುವರೆಸಬೇಕಾಗುತ್ತದೆ. ನಾವು ಯಾವಾಗಲೂ ಅವರು ಇಲ್ಲೇ ಇದ್ದಾರೆ. ನಮ್ಮ ಜೊತೆ ಭಾವನಾತ್ಮಕವಾಗಿ ಇದ್ದಾರೆ ಅಂತಾ ನಾವು ಇದ್ದೇವೆ. ಬೇರೆಯ ಸಂತರು ನಮ ಪೂಜ್ಯರನ್ನು ಆದರ್ಶವಾಗಿ ಇಟ್ಟುಕೊಂಡಿದ್ದಾರೆ. ಲಿಂಗಾಯತರೇತರವಾಗಿ ಎಲ್ಲರೂ ನಮ್ಮ ಸ್ವಾಮೀಜಿಯನ್ನು ಆದರ್ಶ ಮಾಡಿಕೊಂಡಿದ್ದಾರೆ. ನೀವು ಊಟ ಮಾಡಿ, ನೀವು ಮಲಗಿ ಅಂತಾ ಹೇಳುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗ ಕೂಡ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು ಪೂಜೆ ಮಾಡುತ್ತಿದ್ದರು. ಕರಡಿಗೆ ಅಥವಾ ಲಿಂಗವನ್ನು ಕೈಯಿಂದ ಯಾವುದೇ ಕಾರಣಕ್ಕೂ ತೆಗೆಯಬಾರದು ಅಂತಾ ಆಸ್ಪತ್ರೆಯಲ್ಲಿ ಕಂಡೀಷನ್ ಹಾಕಿದ್ದೆವು.

ಅವರು ಆಸ್ಪತ್ರೆಯಲ್ಲಿದ್ದಾಗಲೂ ಮಕ್ಕಳು ಹೇಗಿದ್ದಾರೆ. ದನ ಕರುಗಳು ಚೆನ್ನಾಗಿವೆಯೇ, ಬಿತ್ತನೆ ಬೀಜ ಹಾಕಿದ್ದೀರಾ ಅಂತಾ ಕೇಳುತ್ತಿದ್ದರು. ಆಸ್ಪತ್ರೆಯಿಂದ ಬಂದ ಬಳಿಕ ಕೂಡ ಸೋಂಕು ತಗುಲಿತ್ತು. ಆಗಾಗಿ ಅವರು ಲಿಂಗೈಕ್ಯರಾದರು. ಆಸ್ಪತ್ರೆಯಲ್ಲಿ ಇನ್ನೂ ಸ್ವಲ್ಪ ದಿನ ಇರಬೇಕಾಗಿತ್ತು. ಅವರ ಒತ್ತಾಯದ ಮೇರೆಗೆ ನಾವು ಮಠಕ್ಕೆ ಕರೆದುಕೊಂಡು ಬಂದೆವು.
ರಾಜಕಾರಣಿಗಳು ಯಾರೇ ಬಂದು ಏನೇ ಹೇಳಿದರೂ ಅವರು ಕೇಳುತ್ತಿರಲಿಲ್ಲ. ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲಿಲ್ಲ. ಅವರು ಯಾವಾಗಲೂ ನಗುತ್ತಿದ್ದರು. ನನ್ನ ಬಗ್ಗೆ ನಮ್ಮ ಸ್ವಾಮಿ ಎಲ್ಲಿ ಹೋದರು, ಪೂಜೆ ಮಾಡಿದ್ರಾ, ಊಟ ಮಾಡಿದ್ರಾ ಅಂತಾ ನನ್ನನ್ನ ವಿಚಾರಿಸುತ್ತಿದ್ದರು. ಮಕ್ಕಳ ದುಃಖ ನೋವು ಸಹಜವಾಗಿಯೇ ಇದೆ.

ಸಿದ್ದಗುಹೆಯಲ್ಲಿ ಸಿದ್ದಿ ಪುರುಷರಿದ್ದಾರೆ ಅಂತಾರೆ, ಅಲ್ಲಿನ ಪವಾಡದ ಬಗ್ಗೆ ನನಗೆ ಗೊತ್ತಿಲ್ಲಾ. ಅವರಂತೆ ನಾವು ಕಾರ್ಯ ಮಾಡಲು ಸಾಧ್ಯವಿಲ್ಲ. ಮತ್ತೊಬ್ಬ ಶಿವಕುಮಾರಸ್ವಾಮಿ ಹುಟ್ಟಿ ಬರಬೇಕು, ನನ್ನಿಂದ ಸಾಧ್ಯವಿಲ್ಲ. ಅವರ ಆಹಾರದ ಗುಟ್ಟು ಸರಳ ಜೀವನ, ಶಿಸ್ತುಬದ್ಧ ಆಹಾರ, ದೇಹವನ್ನು ದಂಡಿಸುತ್ತಿದ್ದ ಬಗೆ ಎಲ್ಲವೂ ಸಾಧನೆ ಎಂದು ಹೇಳುತ್ತಿದ್ದರು.

ನಮ್ಮ ಸ್ವಾಮೀಜಿಗಳಿಗೆ ಹೇಗೆ ಕ್ರಿಯಾ ಸಮಾಧಿ ಇದೆ ಹಾಗೆಯೇ ತಮ್ಮ ಕ್ರಿಯಾ ಸಮಾಧಿ ಮಾಡಬೇಕು ಅಂತಾ ಪತ್ರದಲ್ಲಿ ಬರೆದು ಇಟ್ಟಿದ್ದಾರೆ. ನಾನು ಕಟ್ಟಿಸಿದ ಗದ್ದುಗೆಯಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು, ಇದೇ ವಿಧಿವಿಧಾನದ ಪ್ರಕಾರ ಮಾಡಬೇಕು, ಮಠದಲ್ಲೇ ಎಲ್ಲಾ ಕಾರ್ಯ ಮಾಡಬೇಕು, ಮಠದಿಂದ ಬೇರೆಡೆ ಎಲ್ಲಿಯೂ ಮೆರವಣಿಗೆ ಮಾಡಬಾರದು ಅಂತಾ ಸ್ವಾಮೀಜಿ ಹಿಂದೆಯೇ ಪತ್ರದಲ್ಲಿ ಬರೆದುಇಟ್ಟಿದ್ದರು.

Comments are closed.