ಕರಾವಳಿ

ಬೆಂಗಳೂರಿನ ಲಾರಿ ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನ : ಲಾರಿ ಸಹಿತಾ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಸರಕು ತುಂಬಿಸಿಕೊಂಡು ಬಂದಿದ್ದ ಗೂಡ್ಸ್ ಲಾರಿಯನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಲಾರಿ ಚಾಲಕ ಆರೋಪಿಯನ್ನು ಲಾರಿ ಸಮೇತ ಬಂಧಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಲಾರಿ ಚಾಲಕ ಬೆಂಗಳೂರು ರಾಮನಗರಂ ಜಿಲ್ಲೆಯ ಕನಕಪುರ ತಾಲೂಕಿನ ಅರಳೀ ಕಟ್ಟೆ ನಿವಾಸಿ ಮಹೇಶ್ ಎಂದು ಹೆಸರಿಸಲಾಗಿದೆ.

ಬೆಂಗಳೂರು ಮೂಲದ ಲಾರಿ ಮಾಲಕ ಹೆಂಜಾರಪ್ಪ ಸಿದ್ದಪ್ಪ ಎಂಬವರಿಗೆ ಸೇರಿದ ಲಾರಿಯಲ್ಲಿ ದಿನಾಂಕ 06.01.2019 ರಂದು ಚಾಲಕ ಕೆಲಸಕ್ಕೆ ಸೇರಿದ್ದ ಮಹೇಶ್ ಬೆಂಗಳೂರು ನಿಂದ ಲೋಡ್ ಪಡೆದು ಮಂಗಳೂರು ತಲುಪಿ ಅನ್ ಲೋಡ್ ಮಾಡಿದ್ದು, ಬಳಿಕ ಎಲ್ಲಿಗೂ ಬಾಡಿಗೆಗೆ ಹೋಗದೇ ಲಾರಿಯನ್ನು ಮಾರಟ ಮಾಡಲು ಪ್ರಯತ್ನಿಸಿದ್ದು, ನಾಲ್ಕು ದಿನಗಳು ಕಳೆದರೂ ಲಾರಿಯ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದ ಕಾರಣ ಲಾರಿಯ ಮಾಲಕನು ಮಂಗಳೂರಿಗೆ ಬಂದು ಹುಡುಕಾಡಿದಲ್ಲಿ ಲಾರಿ ಕಾಣದೇ ಇದ್ದಾಗ ಪಣಂಬೂರು ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪಣಂಬೂರು ಠಾಣಾ ಪೊಲೀಸರು ಆರೋಪಿ ತಲಾಶೆಯಲ್ಲಿರುವಾಗ ಸುರತ್ಕಲ್ ನ ಮುಕ್ಕ ಟೋಲ್ ಗೇಟ್ ನ ಬಳಿ ಸಿಕ್ಕಿ ಬಿದ್ದಿರುತ್ತಾನೆ. ಲಾರಿಯನ್ನು ಪರಿಶೀಲಿಸಲಾಗಿ ಲಾರಿ ಹಿಂಬದಿಯ ಎರಡು ಟಯರ್ ಗಳು ಮತ್ತು ಟರ್ಪಾಲನ್ನು ಮಾರಾಟ ಮಾಡಿದ್ದು,ಲಾರಿ ಹಾಗೂ ಟಯರ್ ಮತ್ತು ಟರ್ಪಾಲ್ ಮಾರಾಟ ಮಾಡಿದ ಹಣದಲ್ಲಿ ಖರ್ಚಾಗಿ ಉಳಿದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ವಿವರ:  ಕೆಎ 51 ಎ. 0947 ಟಾಟಾ 1109 06 ಚಕ್ರದ ಲಾರಿ ಆಗಿದ್ದು, ಅಂದಾಜು ಮೌಲ್ಯ : ರೂ 7 ಲಕ್ಷ, ನಗದು ಹಣ ರೂ. 9,000/-, ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 5000.

ಪತ್ತೆ ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ, ಉಪ-ನಿರೀಕ್ಷಕರಾದ ಉಮೇಶ್ ಕುಮಾರ್ ಎಂ. ಎನ್, ಮಂಗಳೂರು ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಪಾಲ್ಗೊಂಡಿದ್ದರು.

Comments are closed.