ರಾಷ್ಟ್ರೀಯ

70 ವರ್ಷದ ನಂತರ ಜೀತದಿಂದ ಮುಕ್ತಗೊಂಡ ಆನೆ!

Pinterest LinkedIn Tumblr

ಲಖ್ನೋ: ಪ್ರವಾಸೋದ್ಯಮ ಇಲಾಖೆಯಲ್ಲಿ ಜೀತದಾಳುವಿನಂತೆ ಸೇವೆ ಸಲ್ಲಿಸಿದ್ದ 70 ವರ್ಷದ ಗಜರಾಜ ಇದೇ ಮೊದಲ ಬಾರಿಗೆ ಸ್ವತಂತ್ರ ಜೀವನದ ಮೊದಲ ವರ್ಷದ ಸವಿಯುಂಡಿದ್ದಾನೆ.

ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಎನ್‌ಜಿಒ ಒಂದು ಆರಂಭಿಸಿದ ದೇಶದ ಮೊದಲ ಆನೆ ಆಸ್ಪತ್ರೆಯಲ್ಲಿ ಮೊದಲ ಪೇಶೆಂಟ್ ಆಗಿ ದಾಖಲಾಗಿರುವ 70 ವರ್ಷದ ಆನೆ ಗಜರಾಜ, ಈಗ ಚಿಕಿತ್ಸೆ ಪಡೆಯುವ ಜತೆಗೆ ಸ್ವತಂತ್ರ ಜೀವನ ನಡೆಸುತ್ತಿದ್ದಾನೆ.

ಪೇಟಾ ಮುಂದಾಳತ್ವದಲ್ಲಿ ನಡೆದ #FreeGajraj ಆಂದೋಲನದ ಬಳಿಕ ಆನೆಯನ್ನು ಜೀತದಿಂದ ಮುಕ್ತಗೊಳಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮತ್ತು ವಿಶ್ರಾಂತಿ ನೀಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ಅನಾರೋಗ್ಯದ ಆನೆ ಮತ್ತುಗಾಯಗೊಂಡ ಆನೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯ, ವೈರ್‌ಲೆಸ್ ಎಕ್ಸ್‌ ರೇ, ಥರ್ಮಲ್ ಇಮೇಜಿಂಗ್, ಅಲ್ಟ್ರಾಸೋನೋಗ್ರಫಿ, ಆಂಬುಲೆನ್ಸ್ ಸೌಕರ್ಯವಿದೆ.

ಆನೆ ಆಸ್ಪತ್ರೆಗೆ ದಾಖಲಾಗುವ ಮೊದಲು ಶ್ರೀ ಭವಾನಿ ಮ್ಯೂಸಿಯಂ, ಯಮೈ ದೇವಿ ದೇಗುಲ ಮತ್ತು ಇತರೆಡೆ ಸೇವೆ ಸಲ್ಲಿಸಿತ್ತು. ನಂತರ ಆನೆಯನ್ನು ಬಂಧಮುಕ್ತಗೊಳಿಸಿ, ತಜ್ಞವೈದ್ಯರ ಸಲಹೆಯಂತೆ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ನೀಡಿ ಸಾಕಲಾಗುತ್ತಿದೆ.

Comments are closed.