
ಮಂಗಳೂರು : ರಾಷ್ಟ್ರಪತಿ ರಾಮ್ ನಾತ್ ಕೋವಿಂದ್ ರವರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ರಾಜ್ಯಪಾಲ ವಾಜುಬಾಯಿ ರುದಾಬಾಯಿ ವಾಲಾ ಅವರು ಸ್ವಾಗತಿಸಿದರು.

ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮೇಯರ್ ಭಾಸ್ಕರ ಮೊಯ್ಲಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತರು ಟಿ.ಆರ್. ಸುರೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ರವಿಕಾಂತೇ ಗೌಡ, ಡಿ.ಸಿ.ಪಿ. ಉಮಾಪ್ರಶಾಂತ್, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಮಹಾನಗರಪಾಲಿಕೆ ಆಯಕ್ತರಾದ ಮೊಹಮ್ಮದ್ ನಜೀರ್, ಡಿ.ಡಿ.ಎಲ್.ಆರ್. ಕುಸುಮಾಧರ ಇವರುಗಳು ಉಪಸ್ಥಿತರಿದ್ದರು. ರಾಷ್ಟ್ರಪತಿಗಳು ವಿಮಾನದಿಂದ ಇಳಿದು ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಿದರು.
Comments are closed.