ಮನೋರಂಜನೆ

ಬಂಡಾಯ ಶಾಸಕರ ಬೆದರಿಕೆ ನಡುವೆಯೂ ‘ಕೆಜಿಎಫ್’​ ಚಿತ್ರ ಮೆಚ್ಚಿ ಟ್ವೀಟ್​ ಮಾಡಿದ ಪರಮೇಶ್ವರ್​

Pinterest LinkedIn Tumblr


ಬೆಂಗಳೂರು: ಸಂಪುಟ ವಿಸ್ತರಣೆ ಹಿನ್ನಲೆ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ಬಂಡಾಯ ಸಾರಿರುವ ನಡುವಿನ ಬಿಕ್ಕಟ್ಟಿನ ನಡುವೆ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್​, ರಾಜಕೀಯ ಜಂಜಾಟ ಮರೆತು ಕನ್ನಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಪುಟ ವಿಸ್ತರಣೆಗೂ ಒಂದು ದಿನ ಮುನ್ನ ಬಿಡುಗಡೆಯಾದ ಕೆಜಿಎಫ್​ ಚಿತ್ರದ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಸಿನಿಮಾವೊಂದು ಅದ್ಬುತವಾಗಿ ಚಿತ್ರೀಕರಿಸುವ ಮೂಲಕ ಯಾವ ಸಿನಿಮಾ ಇಂಡಸ್ಟ್ರಿಗೂ ಕಡಿಮೆ ಇಲ್ಲ ಎಂಬ ಮಾತು ಸಿನಿ ಜಗತ್ತು ಹಾಗೂ ಜನರ ಬಾಯಲ್ಲಿ ಕೇಳಿ ಬರುತ್ತಿದೆ.

ಪಂಚ ಭಾಷೆಗಳಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಬೇರೆ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಈಗ ಉಪಮುಖ್ಯಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡದ ಸಿನೆಮಾವೊಂದು ಕರ್ನಾಟಕವನ್ನು ದಾಟಿ ದೇಶದುದ್ದಗಲಕ್ಕೂ ಹಾಗೂ ವಿದೇಶದಲ್ಲೂ ಜನಮನವನ್ನು ಗೆಲ್ಲುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರ. ನಮ್ಮ ಕನ್ನಡ ಚಿತ್ರರಂಗ ಬೇರಾರಿಗೂ ಕಮ್ಮಿಯಿಲ್ಲ ಎಂದು ಅವುಗಳ ಯಶಸ್ಸಿನ ಮೂಲಕ‌‌ವೇ ಸಾರುವ ಸಮಯ ಬಂದಿದೆ. #KGF ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು!

ಕನ್ನಡ ಸಿನಿಮಾವೊಂದು ರಾಜ್ಯದ ಗಡಿ ದಾಟಿ ದೇಶ ವಿದೇಶದ ಜನರ ಮನಗೆಲ್ಲುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ನಮ್ಮ ಕನ್ನಡ ಚಿತ್ರರಂಗ ಬೇರಾರಿಗೂ ಕಮ್ಮಿಯಿಲ್ಲ ಎಂದು ಕೆಜಿಎಫ್​ ಚಿತ್ರ ಸಾರಿದೆ ಎಂದು ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಸಿನಿಮಾ ಬಿಡುಗಡೆಯಾದ ಮಾರನೇ ದಿನವೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಸಚಿವ ಸ್ಥಾನ ತಪ್ಪಿದ ಹಿನ್ನಲೆ ಬಂಡಾಯ ಶಾಸಕರ ನಡೆ ಪಕ್ಷದ ಎಲ್ಲರ ನಿದ್ದೆಗೆಡಿಸಿದೆ. ಈ ನಡುವೆಯೂ ಡಿಸಿಎಂ ಕೆಜಿಎಫ್​ ಚಿತ್ರವನ್ನು ಮೆಚ್ಚಿ ಕೊಂಡಾಡಿರುವುದು ಸಂತಸದ ವಿಷಯವಾಗಿದೆ.

ಬಿಡುಗಡೆಯಾದ ಮೂರೇ ದಿನಕ್ಕೆ ಕೆಜಿಎಫ್​ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ದೇಶಲದಲ್ಲಿ ಸದ್ದು ಮಾಡುತ್ತಿದ್ದು 100 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಹಾಲಿವುಡ್​ ಮಟ್ಟಿನ ಚಿತ್ರ ಇದು ಎಂಬ ಮೆಚ್ಚುಗೆ ಎಲ್ಲೆಡೆ ಕೇಳಿ ಬರುತ್ತಿದೆ.

Comments are closed.