ಕರಾವಳಿ

ಮರಳು ಕೊರತೆ ಹಿನ್ನೆಲೆ : ಡಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಂ

Pinterest LinkedIn Tumblr

ಮಂಗಳೂರು ಡಿಸೆಂಬರ್ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಿಆರ್‍ಝಡ್ ಪ್ರದೇಶದಲ್ಲಿ ಗುರುತಿಸಿ ಪರವಾನಿಗೆ ನೀಡಿರುವ ಮರಳು ದಿಬ್ಬಗಳಿಂದ ಹಾಗೂ ನಾನ್ ಸಿಆರ್‍ಝಡ್ ಪ್ರದೇಶದಲ್ಲಿ ಗುರುತಿಸಿ ಮರಳು ತೆಗೆಯಲು ಗುತ್ತಿಗೆ ನೀಡಿರುವ ಮರಳು ಬ್ಲಾಕ್‍ಗಳಿಂದ ಮರಳನ್ನು ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಹಾಗೂ ಇತರೆ ಕಾಮಗಾರಿಗಳಿಗೆ ಪೂರೈಸಲಾಗುತ್ತಿದೆ.

ಈ ಕಾಮಗಾರಿಗಳಿಗೆ ಮರಳು ಕೊರತೆ ಉಂಟಾಗಬಾರದೆಂಬ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿರುತ್ತದೆ.

ಆದ್ದರಿಂದ ಇಂತಹ ಕಾಮಗಾರಿಗಳಿಗೆ ಮರಳಿನ ಬೇಡಿಕೆಯಿದ್ದಲ್ಲಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 0824-2421610 ಸಂಪರ್ಕಿಸಿ ಅವಶ್ಯವಿರುವ ಮರಳಿನ ಪ್ರಮಾಣ, ಕಾಮಗಾರಿಯ ಸ್ಥಳ ಹಾಗೂ ಮೊಬೈಲ್ ಸಂಖ್ಯೆಯನ್ನೊಳಗೊಂಡ ಸಂಪರ್ಕ ವಿವರವನ್ನು ನೀಡುವಂತೆ ದ.ಕ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.