
ಚೆನ್ನೈ: ಪ್ರತಿಪಕ್ಷಗಳ ಮೈತ್ರಿಕೂಟದಿಂದ ಪ್ರಧಾನಿ ಅಭ್ಯರ್ಥಿಯಾಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಸೂಕ್ತ ಎಂಬ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ”ಯಾರೋ ಒಬ್ಬರ ಆಯ್ಕೆಯನ್ನು ಮೈತ್ರಿಕೂಟದ ಆಯ್ಕೆ ಎಂದು ಹೇಳಲಾಗದು” ಎಂದಿದ್ದಾರೆ.
ಈ ನಡುವೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸ್ಟಾಲಿನ್, ”ಕೇಂದ್ರದಲ್ಲಿ ಬಿಜೆಪಿಯ ಪ್ರಭಾವಳಿಯನ್ನು ತಗ್ಗಿಸುವ ಸಾಮರ್ಥ್ಯ ರಾಹುಲ್ ಅವರಿಗಿದೆ. ಹೀಗಾಗಿ ಎಲ್ಲ ಜಾತ್ಯತೀತ ಪಕ್ಷಗಳು ಅವರನ್ನು ಬೆಂಬಲಿಸಬೇಕು,” ಎಂದು ಮನವಿ ಮಾಡಿದ್ದಾರೆ.
ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದಕ್ಕೆ ಈಗಾಗಲೇ ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ವಿರೋಧ ವ್ಯಕ್ತಪಡಿಸಿವೆ. ಎಡಪಕ್ಷಗಳು ಮಾತ್ರ ಸ್ಟಾಲಿನ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಎರಡು ದಿನ ಹಿಂದೆ ಚೆನ್ನೈನಲ್ಲಿ ನಡೆದ ಎಂ.ಕರುಣಾನಿಧಿ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಸ್ಟಾಲಿನ್ ಅವರು ರಾಹುಲ್ ಅವರೇ ಮಹಾಘಟಬಂಧನ್‌ನ ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ಎಂದಿದ್ದರು.ಈ ಕುರಿತು ಪರೋಕ್ಷವಾಗಿ ಪ್ರಸ್ತಾಪ ಮಾಡಿರುವ ಸ್ಟಾಲಿನ್, ”ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗಳ ಮೂಲಕವೇ ಎಷ್ಟೋ ಸಲ ಪರಿಹಾರ ಸಿಗುತ್ತದೆ. ಅನೇಕ ಸಂದರ್ಭಗಳಲ್ಲಿ ಒಳ್ಳೆಯ ಫಲಿತಾಂಶವೇ ಬರುತ್ತದೆ” ಎಂದಿದ್ದಾರೆ.
ಸ್ಟಾಲಿನ್ ಅವರ ಪ್ರಸ್ತಾವಕ್ಕೆ ಮಿತ್ರಪಕ್ಷಗಳ ನಡುವೆಯೇ ಒಮ್ಮತವಿಲ್ಲ. ಅಷ್ಟಕ್ಕೂ ಇನ್ನು 10 ವರ್ಷ ಪ್ರಧಾನಿ ಹುದ್ದೆ ಖಾಲಿ ಇಲ್ಲ.
– ರಾಮ್‌ಮಾಧವ್, ಬಿಜೆಪಿ ಪ್ರಧಾನ ಕಾರ್ಯದರ್ಶಿ
Comments are closed.