ಮನೋರಂಜನೆ

ನನ್ನ ಮಿಲ್ಕಿ ಬ್ಯೂಟಿ ಎಂದು ಕರಿಯಬೇಡಿ: ನಟಿ ತಮನ್ನಾ ಭಾಟಿಯಾ

Pinterest LinkedIn Tumblr


ಹೈದರಾಬಾದ್: ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಭಾಟಿಯಾ ಈಗ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ತಮನ್ನಾ ಅವರು ಬೆಳ್ಳಗಿದ್ದಾರೆ. ಅಲ್ಲದೇ ಅವರ ಚರ್ಮ ಹಾಲಿನ ಬಣ್ಣ ಹೊಂದಿದ್ದು, ಎಲ್ಲರು ಅವರನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ತಮನ್ನಾ ಬಹುಭಾಷಾ ನಟಿಯಾಗಿದ್ದು, ಎಲ್ಲ ಚಿತ್ರರಂಗದಲ್ಲೂ ಅವರನ್ನು ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನಾ “ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ. ಆ ರೀತಿ ಕರೆದರೆ ನನಗೆ ಕೋಪ ಬರುತ್ತದೆ. ನನ್ನ ಸ್ಕಿನ್ ಕಲರ್ ಆಧಾರದ ಮೇಲೆ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಈ ರೀತಿ ಬಣ್ಣದ ಆಧಾರದ ಮೇಲೆ ಯಾರನ್ನು ಅಳೆಯಬಾರದು. ಚಿತ್ರರಂಗದಲ್ಲಿ ಈಗ ಇದು ಜಾಸ್ತಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ” ಎಂದರು.

ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾದಲ್ಲಿ ತಮನ್ನಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. `ಪರೋಪಕಾರಿ’ ಕನ್ನಡ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು’ ಐಟಂ ಸಾಂಗನ್ನು ರಿಮಿಕ್ಸ್ ಮಾಡಲಾಗಿರುವ ಹಾಡು ಇದಾಗಿದ್ದು, ಇದೀಗ `ಕೆಜಿಎಫ್’ ಚಿತ್ರಕ್ಕಾಗಿ ರವಿ ಬಸ್ರೂರ್ ರೀ-ಕ್ರಿಯೇಟ್ ಮಾಡಿದ್ದಾರೆ.

ಹಿಂದಿನ ಹಾಡಿಗೆ ಎಲ್.ಆರ್ ಈಶ್ವರಿ ಧ್ವನಿಯಾಗಿದ್ದರು. ಇದೀಗ ಐರಾ ಉಡುಪಿ ಹಿನ್ನಲೆ ಗಾಯನದಲ್ಲಿ ಹೊಸ ಜೋಕೆ ರಿಮಿಕ್ಸ್ ಹಾಡು ಮೂಡಿ ಬಂದಿದೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಹಾಡನ್ನು ರಿಲೀಸ್ ಮಾಡಿದೆ. ಕೆಜಿಎಫ್ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ.

Comments are closed.