
ನವದೆಹಲಿ: ಫೇಸ್‍ಬುಕ್‍ನಲ್ಲಿ ಪರಿಚಿತಳಾದ ಪ್ರೇಯಸಿ ನೋಡಲು ಅಕ್ರಮವಾಗಿ ಪಾಕ್ ಪ್ರವೇಶಿಸಿ 6 ವರ್ಷದಿಂದ ಜೈಲಿನಲ್ಲಿದ್ದ ಮುಂಬೈ ಟೆಕ್ಕಿ ಹಮಿದ್ ನೆಹಾಲ್ ಅನ್ಸಾರಿ ಬಿಡುಗಡೆಯಾಗಿದ್ದಾನೆ.
ಪ್ರಿಯತಮೆಯನ್ನು ಭೇಟಿ ಮಾಡಲು ಹಮಿದ್ ಅನ್ಸಾರಿ 2012ರಲ್ಲಿ ನಕಲಿ ಪಾಸ್‍ಪೋರ್ಟ್ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದ. ಆದರೆ ಈತ ಭಾರತೀಯ ಗುಪ್ತಚರ ಎಂದು ಬಂಧಿಸಿ 2015ರಲ್ಲಿ 3 ವರ್ಷ ಜೈಲಿನಲ್ಲಿ ಇರಿಸಲಾಗಿತ್ತು. ಅನ್ಸಾರಿಯನ್ನು ಭಾರತಕ್ಕೆ ಕರೆತರುವುದು ಅಧಿಕಾರಿಗಳಿಗೆ ಮತ್ತು ಅನ್ಸಾರಿ ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು. ರಾಯಭಾರಿ ಕಚೇರಿಗೆ ಪ್ರವೇಶ ಪಡೆಯಲು ಕಳಿಸಿದ 96 ಮನವಿಗನ್ನು ಪಾಕಿಸ್ತಾನ ತಿರಸ್ಕರಿಸಿತ್ತು.
ನನ್ನ ಮಗ ಪಾಕಿಸ್ತಾನದಲ್ಲಿ ಬಂಧಕ್ಕೊಳಗಾದಾಗ ನಮಗೆ ದಿಕ್ಕು ತೋಚದಂತಾಗಿತ್ತು. ಧೃತಿಗಡದೇ ಕಾನೂನುಂ ಹೋರಾಟ ಆರಂಭಿಸಿದೆವು. ನಮ್ಮ ಹೋರಾಟಕ್ಕೆ ಭಾರತ ಸರ್ಕಾರ ಸಹ ಬೆಂಬಲ ನೀಡಿದ್ದರಿಂದ ನಾವು ಮಗನಿಗಾಗಿ ಕಾಯುತ್ತಿದ್ದೇವು. ದೇವರು ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ಇಂದು ಮಗ ತಾಯ್ನಾಡಿಗೆ ಆಗಮಿಸಿದ್ದಾನೆ ಎಂದು ಹಮಿದ್ ತಾಯಿ ಹೇಳಿದ್ದಾರೆ.
ಸದ್ಯ ಹಮಿದ್ ಶಿಕ್ಷೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇವತ್ತು ಬಿಡುಗಡೆಗೊಳಿಸಲಾಯ್ತು. ಅಂದಹಾಗೆ, ಈ ಘಟನೆ ಶಾರೂಕ್ -ಪ್ರೀತಿ ಝಿಂಟಾ ಅಭಿನಯದ ವೀರ್ ಝರಾ ಸಿನಿಮಾವನ್ನು ನೆನಪಿಸಿದೆ.
Comments are closed.