
ಶಬರಿಮಲೆ: ಶಬರಿಮಲೆ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ, ದೇಗುಲದ ಪೂಜಾರಿಗಳು ಹಾಗೂ ಪ್ರಮುಖವಾಗಿ ಅಯ್ಯಪ್ಪನ ಪುರುಷ ಭಕ್ತರು ಅವಕಾಶ ಕೊಡುತ್ತಿಲ್ಲ. ಹೀಗಾಗಿ, ಭಕ್ತರು ಈ ತಡೆಗೋಡೆಯನ್ನು ದಾಟಲು ಹೊಸ ಹೊಸ ವಿಧಾನಗಳನ್ನು ಕಂಡು ಹಿಡಿಯುತ್ತಿದ್ದಾರೆ.
ಶಬರಿಮಲೆಯ ಸನ್ನಿಧಾನಕ್ಕೆ ತೆರಳುವ ಪುರುಷ ಭಕ್ತರು ತಮ್ಮ ಪತ್ನಿ ಹಾಗೂ ತಾಯಿಗೆ ವೀಡಿಯೋ ಕಾಲ್ ಮಾಡುವ ಮೂಲಕ ತಂತ್ರಜ್ಞಾನದ ಮೂಲಕ ಅಯ್ಯಪ್ಪನನ್ನು ನೋಡುವಂತೆ ಮಾಡುತ್ತಿದ್ದಾರೆ. ಇದರಿಂದ ಯಾವ ನಂಬಿಕೆಗಳಿಗೂ ಹೊಡೆತ ಬೀಳುವುದಿಲ್ಲ ಹಾಗೂ ಯಾವುದೇ ಗಲಾಟೆಯಾಗದ ಕಾರಣ ಹಲವು ಭಕ್ತರು ಈ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಸುಪ್ರೀಂಕೋರ್ಟ್ ಮಹಿಳೆಯರಿಗೆ ಪ್ರವೇಶ ನೀಡಿದ ಬಳಿಕವೂ ಇದುವರೆಗೆ 10 – 50 ವರ್ಷದ ಯಾವ ಮಹಿಳೆಯೂ ಶಬರಿಮಲೆ ದೇಗುಲಕ್ಕೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ತಂತ್ರಜ್ಞಾನದ ಮೂಲಕ ಅಯ್ಯಪ್ಪನನ್ನು ಮಹಿಳೆಯರನ್ನು ತೋರಿಸುತ್ತಿದ್ದಾರೆ.
Comments are closed.