ರಾಷ್ಟ್ರೀಯ

ಹನುಮಾನ್ ಮನುವಾದಿಗಳ ಗುಲಾಮ – ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ

Pinterest LinkedIn Tumblr


ನವದೆಹಲಿ: ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ಹನುಮಾನ್ ದಲಿತ ಆದರೆ ಮನುವಾದಿಗಳ ಗುಲಾಮನಾಗಿದ್ದಾನೆ ಎಂದು ಹೇಳಿದ್ದಾರೆ.

ಇತ್ತೀಚಿಗೆ ಹನುಮಾನ್ ನ ಜಾತಿಯ ವಿಚಾರವಾಗಿ ನಡೆದ ಚರ್ಚೆಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ “ಹನುಮಾನ್ ದಲಿತ ಅವನು ಮನುವಾದಿಗಳ ಗುಲಾಮನಾಗಿದ್ದಾನೆ.ಅವನು ರಾಮನಿಗೆ ಎಲ್ಲವನ್ನು ಮಾಡಿದ ಆದರೆ ಏಕೆ ಅವನ ಬಾಲ ಮತ್ತು ಮುಖವನ್ನು ಕಪ್ಪಾಗಿ ಚಿತ್ರಿಸಲಾಗಿದೆ,ಮತ್ತು ಅವನನ್ನು ಏಕೆ ಮಂಗನನ್ನಾಗಿ ಮಾಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.ಅವನ ದಲಿತ ಜಾತಿ ಮೂಲದ ಕಾರಣದಿಂದ ಅವನನ್ನು ಶೋಷಣೆಗೆ ಒಳಪಡಿಸಲಾಗಿದೆ.ದಲಿತರಾದ ನಾವೇಕೆ ಮನುಷ್ಯರಂತೆ ಕಾಣಲಾಗುತ್ತಿಲ್ಲ “ಎಂದು ಅವರು ಪಿಟಿಐಗೆ ಫೋನ್ ಮೂಲಕ ತಿಳಿಸಿದರು.

ಅಳ್ವಾರದ ಮಲಖೇಡ ಜಿಲ್ಲೆಯಲ್ಲಿ ಆದಿತ್ಯನಾಥ್ ಅವರು ಭಾಷಣದಲ್ಲಿ ಮಾತನಾಡುತ್ತಾ ಅವರನ್ನು ದಲಿತ ಎಂದು ಸಂಬೋಧಿಸಿದ್ದರು. ಇದಾದ ನಂತರ ಹನುಮನ ಜಾತಿಯ ಚರ್ಚೆ ಮುನ್ನಲೆಗೆ ಬಂದಿತ್ತು.ಈ ಹಿನ್ನೆಲೆಯಲ್ಲಿ ಈಗ ಸಂಸದೆ ಸಾವಿತ್ರಿ ಬಾಯಿ ಫುಲೆ ಈಗ ಹನುಮಾನ್ ದಲಿತ ಆದರೆ ಅವನು ಮನುವಾದಿಗಳ ಗುಲಾಮನಾಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

Comments are closed.