
ಬೆಂಗಳೂರು: ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದು, ಹೇಳುವುದು ಒಂದು ಮಾಡುವುದು ಮತ್ತೊಂದು ಹೇಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಶನಿವಾರ ರಾಜಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಜೋಧಪುರದ ತಾಜ್ ಉಮಾಯಿದ್ ಭವನ ಅರಮನೆಯಲ್ಲಿ ಕ್ರೈಸ್ತ ಸಂಪ್ರದಾಯದಂತೆ ನಿಕ್ ಜೊನಾಸ್ ಹಾಗೂ ಪ್ರಿಯಾಂಕಾ ಸತಿಪತಿಗಳಾದರು. ಮದುವೆ ಸಮಾರಂಭದ ಬಳಿಕ ಅರಮನೆಯ ಹೋಟೆಲ್ ಆವರಣದಲ್ಲಿ ಪಟಾಕಿ ಸಿಡಿಸುವ ಪ್ರದರ್ಶನ ಏರ್ಪಡಿಸಲಾಗಿತ್ತು.
ವಾಯುಮಾಲಿನ್ಯ ತಡೆ ಚಳುವಳಿಯ ಬ್ರಾಂಡ್ ಅಂಬಾಸಿಡರ್ ನೀವೇ ಆಗಿದ್ದು, ನಿಮ್ಮ ಮದುವೆ ಸಮಾರಂಭದಲ್ಲಿಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಿಯಾಂಕ ಅವರನ್ನು ಪ್ರಶ್ನಿಸುತ್ತಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಿಯಾಂಕ ಚೋಪ್ರಾ ವಾಯುಮಾಲಿನ್ಯ ತಡೆ ಚಳಿವಳಿಯಲ್ಲಿ ಭಾಗವಹಿಸಿ ದೇಶದ ಜನತೆಯಲ್ಲಿ ಪಟಾಕಿ ಸಿಡಿಸದಂತೆ ಜಾಗೃತಿ ಮೂಡಿಸಿ ಮನವಿ ಮಾಡಿದ್ದರು. ಅಲ್ಲದೇ ಪ್ರಿಯಾಂಕ ಅವರು ಅಸ್ತಮಾ ಅನಾರೋಗ್ಯದ ಸಂಬಂಧಿಸಿದ ಜಾಗೃತಿ ಮೂಡಿಸುವ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಬ್ರಿಥ್ ಫ್ರೀ ಕ್ಯಾಂಪೆನ್ ನಲ್ಲಿ ಕೂಡ ಭಾಗವಹಿಸಿರುವ ಪ್ರಿಯಾಂಕ ವಿಶ್ವಾದ್ಯಂತ ಅಸ್ತಮಾದಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಹೇಳಿಕೊಳ್ಳಲು ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ. ನನಗೂ ಅಸ್ತಮಾ ಇದೆ. ಅದನ್ನು ಕಂಟ್ರೋಲ್ ಮಾಡುತ್ತೇನೆ. ನನ್ನ ಗುರಿ ಸಾಧನೆಗೆ ಅಡ್ಡ ಬರಲು ಸಾಧ್ಯವಿಲ್ಲ ಎಂದು ಅಸ್ತಮಾ ರೋಗಿಗಳಿಗೆ ಈ ಹಿಂದೆ ಧೈರ್ಯ ತುಂಬಿದ್ದರು.
Comments are closed.