
ಅರ್ಜೆಂಟೈನಾ: ವಿಶ್ವ ಜಿ-20 ಶೃಂಗಸಭೆ ಈ ಬಾರಿ ದಕ್ಷಿಣಾ ಅಮೇರಿಕಾದ ಅರ್ಜೆಂಟೈನಾದಲ್ಲಿ ನಡೆಯುತ್ತಿದ್ದು, ಆರಂಭದಿಂದಲೂ ಒಂದಲ್ಲಾ ಒಂದು ವಿವಾದಗಳಿಗೆ ಸಾಕ್ಷಿಯಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪರಸ್ಪರ ಹೈಫೈ ಮಾಡಿದ್ದು ವಿವಾದಕ್ಕೆ ಈಡಾಗಿತ್ತು. ಅದಾದ ನಂತರ ಫ್ರಾನ್ಸ್ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ರನ್ನು ಬರಮಾಡಿಕೊಳ್ಳಬೇಕಿದ್ದ ಅರ್ಜೆಂಟೈನಾ ನಿಯೋಗ ತಡವಾಗಿ ವಿಮಾನ ನಿಲ್ದಾಣಕ್ಕೆ ಹೋಗಿತ್ತು. ಇದರಿಂದ ಖಾಲಿ ವಿಮಾನ ನಿಲ್ದಾಣ ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸುವಂತಾಗಿತ್ತು.
ಈಗ ಮತ್ತೊಂದು ವಿವಾದವನ್ನು ಅರ್ಜೆಂಟೈನಾದ ಕ್ರೋನಿಕಾ ಟಿವಿ ಎಂಬ ಸುದ್ದಿ ವಾಹಿನಿ ಸೃಷ್ಟಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅರ್ಜೆಂಟೈನಾಗೆ ಬಂದಿಳಿದಾಗ, ‘ಅಪು ಬಂದಿದ್ದಾರೆ’ ಎಂದು ಕಾರ್ಟೂನ್ ಪಾತ್ರವೊಂದರ ಚಿತ್ರ ಪ್ರಸಾರ ಮಾಡಿದೆ. ಜನಾಂಗೀಯ ಅವಹೇಳನದಂತೆ ಮೇಲ್ನೋಟಕ್ಕೆ ಕಾಣುವ ಈ ಸುದ್ದಿ ಸಾಮಾಜಿಕ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಂದು ಬಣ್ಣದ ಕಾರ್ಟೂನ್ ಪಾತ್ರ ‘ಅಪು’ ಚಿತ್ರ ಹಾಕಿ ವರ್ಣಬೇಧವನ್ನು ಮಾಡಿದ್ದಾರೆ ಎಂದು ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಭಾರತೀಯ ಮೂಲದ ಅಮೆರಿಕಾ ಪ್ರಜೆ ಹರಿ ಕೊಂಡಬೋಳು, ‘ದಿ ಪ್ರಾಬ್ಲಮ್ ವಿತ್ ಅಪು’ ಎಂಬ ಡಾಕ್ಯುಮೆಂಟರಿಯೊಂದನ್ನು ಮಾಡಿದ್ದರು. ಭಾರತೀಯ ಮೂಲದವರ ಹಾಲಿವುಡ್ನಲ್ಲಿನ ರೂಢೀಗತ ಚಿತ್ರಣವನ್ನು ಈ ಡಾಕ್ಯುಮೆಂಟರಿ ತೋರಿಸಿತ್ತು.
Comments are closed.