ಹಾಸನ: ನಗರದ ಹೊಸ ಬಸ್ನಿಲ್ದಾಣ ಬಳಿ 1865 ಕೋಟಿಗಳ ಮೊತ್ತದ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಇಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿಳಿಕೆರೆ-ಹಾಸನ-ಬೇಲೂರು ಮೂರು ರಸ್ತೆಗಳ ಮೂರು ಪ್ಯಾಕೇಜ್ಗಳಿಗೆ ಶಂಕುಸ್ಥಾಪನೆ ನಡೆಯಿತು. ಅರಸೀಕೆರೆ- ಹುಳಿಯಾರು- ಬಾಣವಾರ ರಸ್ತೆಯ ತುಮಕೂರು ರಸ್ತೆ, ಕದಬಳಿಯಿಂದ ಚನ್ನರಾಯ ಪಟ್ಟಣ ಬೈಪಾಸ್ ಮತ್ತು ಹಾಸನ್ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಒಟ್ಟಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಹಲವು ದಿನಗಳ ಬಳಿಕ ಹಾಸನಕ್ಕೆ ಬಂದಿದ್ದೇನೆ. ದೇವೇಗೌಡರು ಹಾಸನಕ್ಕೆ ಬರುವಂತೆ ಆಹ್ವಾನಿಸಿದ್ದರು. ಅದಕ್ಕೆ ಈಗ ಸಮಯ ಒದಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ದಿನಕ್ಕೆ 2 ಕಿ.ಮೀ.ನಷ್ಟು ಹೆದ್ದಾರಿ ಕೆಲಸ ಮುಗಿಸಿ, ಮಾರ್ಚ್ ಕೊನೆಗೆ ಹಾಸನದ ಎಲ್ಲ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದರು.
ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆ ಕಾಮಗಾರಿಗೆ ಜನವರಿಯಲ್ಲಿ ಪ್ರಾರಂಭ ಮಾಡಲಾಗುವುದು. ಇದಕ್ಕಾಗಿ ಸಿಎಂ ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಇನ್ನು ಬೆಂ-ಚೆನ್ನೈ ಕೈಗಾರಿಕಾ ಹೆದ್ದಾರಿ ಶೀಘ್ರ ಆರಂಭವಾಗಲಿದ್ದು, ಚೆನ್ನೈ- ಬೆಂಗಳೂರು ವರ್ತುಲ ರಿಂಗ್ ರಸ್ತೆಗೆ ಚಿಂತನೆ ನಡೆದಿದೆ ಎಂದರು.
ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ ಕಾರಿಡಾರ್, ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಸೇರಿದಂತೆ ನಾಲ್ಕು ರಾಜ್ಯದ ರಸ್ತೆಗಳನ್ನು ಈ ಹಿಂದೆ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕೆ ಏರಿಸಿತು.
ಗಡ್ಕರಿ ಹೊಗಳಿದ ರೇವಣ್ಣ
ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಕೇಂದ್ರ ಸಚಿವರನ್ನು ಲೋಕೋಪಯೋಗಿ ಸಚಿವ ನಿತ್ ಗಡ್ಕರಿ ವೇದಿಕೆಯಲ್ಲಿ ಹಾಡಿ ಹೊಗಳಿದರು. ನಮ್ಮೆಲ್ಲಾ ಕೆಲಸಕ್ಕೆ ಗಡ್ಕರಿ ಸ್ಪಂದಿಸಿದ್ದಾರೆ. ಅವರೊಬ್ಬರು ಪಕ್ಷಾತೀತ ನಾಯಕರು. ಯಾವುದೇ ಕೆಲಸ ಕೇಳಿದ್ರೂ ಇಲ್ಲ ಎನ್ನುವುದಿಲ್ಲ ಎಂದು ಶ್ಲಾಘಿಸಿದರು.
Comments are closed.