ಮನೋರಂಜನೆ

ಥಗ್ಸ್ ಆಫ್ ಹಿಂದೂಸ್ತಾನ್ ಸೋತ ಬಗ್ಗೆ ಅಮೀರ್ ಖಾನ್ ಪ್ರತಿಕ್ರಿಯೆ ನೋಡಿ…

Pinterest LinkedIn Tumblr

ಬಾಲಿವುಡ್ ನ ಬಹುನಿರೀಕ್ಷಿತ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಅದ್ಧೂರಿ ಓಪನಿಂಗ್ ಕಂಡರೂ ನಂತರದ ದಿನಗಳಲ್ಲಿ ಹೀನಾಯ ಪ್ರದರ್ಶನ ಕಂಡು ಚಿತ್ರ ಅಟ್ಟರ್ ಫ್ಲಾಪ್ ಆಗಿದೆ. ಈ ಹಿನ್ನೆಲೆಯಲ್ಲಿ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ಚಿತ್ರದ ಕುರಿತಂತೆ ಅಭಿಮಾನಿಗಳಿಗೆ ಕೆಲ ಮಾತುಗಳನ್ನು ಹೇಳಿದ್ದಾರೆ.

300 ಕೋಟಿ ರುಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ಬಿಡುಗಡೆಯಾಗಿ 22 ದಿನ ಕಳೆದರೂ 150 ಕೋಟಿ ರುಪಾಯಿ ಗಳಿಸಲು ಸಾಧ್ಯವಾಗಿಲ್ಲ. ಅಲ್ಲಿಗೆ ಚಿತ್ರ ಹೀನಾಯವಾಗಿ ಸೋತಿದ್ದು ಈ ಹಿನ್ನೆಲೆಯಲ್ಲಿ ಸೋಲಿನ ಹೊಣೆ ಹೊತ್ತಿರುವ ಅಮೀರ್ ಖಾನ್ ತಪ್ಪುಗಳ ಕುರಿತಂತೆ ಹೇಳಿಕೊಂಡಿದ್ದಾರೆ.

ಚಿತ್ರ ಫ್ಲಾಪ್ ಆಗಿದ್ದರಿಂದ ವಿತರಕರು ಹಣವನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದು ಇದಕ್ಕೆ ಉತ್ತರಿಸಿರುವ ಅಮೀರ್ ತಾವು ವಿತರಕರಿಗೆ ಹಣ ನೀಡುವುದಾಗಿ ಹಾಗೂ ಚಿತ್ರ ಸೋಲಿನ ಸಂಪೂರ್ಣ ಹೊಣೆ ಹೊರುವುದಾಗಿ ಹೇಳಿದ್ದಾರೆ.

ನಾವು ನಮ್ಮ ಕೈಯಲ್ಲಾದಷ್ಟು ಒಳ್ಳೆಯದನ್ನೇ ಕೊಡಲು ಪ್ರಯತ್ನಿಸಿದ್ದೇವೆ. ಆದರೆ ಕೆಲವೊಂದು ಕಡೆ ಎಡವಿದ್ದು ಅದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು ಚಿತ್ರವನ್ನು ಮೆಚ್ಚಿದ ಕೆಲ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

300 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಮೊದಲ ದಿನ ಕಲೆಕ್ಷನ್ನಲ್ಲಿ ಬಾಹುಬಲಿ ಚಿತ್ರದ ದಾಖಲೆಯನ್ನು ಧೂಳಿಪಟ ಮಾಡಿತ್ತು. ಆದರೆ ನಂತರ ದಿನಗಳಲ್ಲಿ ಚಿತ್ರದ ಬಗ್ಗೆ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿಬಂದಿದ್ದರಿಂದ ಚಿತ್ರವನ್ನು ನೋಡಲು ಅಭಿಮಾನಿಗಳು ಹಿಂದೇಟು ಹಾಕಿದರ. ಇದರಿಂದಾಗಿ ಒಟ್ಟಾರೆ 150 ಕೋಟಿ ರುಪಾಯಿ ಗಳಿಸಲಷ್ಟೇ ಸಫಲವಾಯಿತು.

Comments are closed.