ರಾಷ್ಟ್ರೀಯ

ಶಬರಿಮಲೆಯನ್ನು ಅಯೋಧ್ಯೆಯಾಗಲು ಬಿಡಲ್ಲ: ಪಿಣರಾಯಿ ವಿಜಯನ್

Pinterest LinkedIn Tumblr


ತಿರುವನಂತಪುರ: ಶಬರಿಮಲೆ ದೇಗುಲವನ್ನು ಎರಡನೇ ಅಯೋಧ್ಯೆಯನ್ನಾಗಿ ಪರಿವರ್ತಿಸಲು ಸಂಘ ಪರಿವಾರದವರು ಮುಂದಾಗಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಹೇಳಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಎದ್ದಿರುವ ಗಲಾಟೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಕರ ಸೇವಕರ ಮೂಲಕ ಸಂಘ ಪರಿವಾರದವರು ಹೈಜಾಕ್ ಮಾಡಲು ಪಿತೂರಿ ನಡೆಸುತ್ತಿದ್ದಾರೆ. ನಂಬಿಕೆಯ ಹೆಸರಿನಲ್ಲು ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಜತೆಗೂಡಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟೂ ಮಾಡಲು ಯತ್ನಿಸುತ್ತಿದೆ. ಪ್ರತಿಭಟನೆಯ ನಿಜವಾದ ಉದ್ದೇಶಗಳು ಈಗಾಗಲೇ ಬಹಿರಂಗಗೊಂಡಿದೆ. ತನ್ನ ರಾಜಕೀಯ ಹೋರಾಟಕ್ಕಾಗಿ ದೇಗುಲ ಬಳಕೆ ಮಾಡಿಕೊಳ್ಳುವುದನ್ನು ಬಿಜೆಪಿ ನಿಲ್ಲಿಸಬೇಕು. ತಮ್ಮ ರಾಜಕೀಯ ಲಾಭಕ್ಕಾಗಿ ಭಕ್ತಾದಿಗಳಿಗೆ ಸಮಸ್ಯೆಗಳನ್ನು ಬಳಸಿಕೊಳ್ಳಬಾರದು. ರಾಜಕೀಯ ಹೋರಾಟ ನಡೆಸಲೇಬೇಕಿದ್ದರೆ, ನಮ್ಮ ಹಾಗೂ ನಿಮ್ಮ ನಡುವೆ ನೇರನೇರ ಕಾನೂನು ನಡೆಯಲಿ. ಇದಕ್ಕೆ ಶಬರಿಮಲೆ ವೇದಿಕೆಯೇಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.

Comments are closed.