ಕರಾವಳಿ

ಶ್ರೀ ಪದ್ಮಾವತಿ ದೇವಸ್ಥಾನಕ್ಕೆ ಕಾಶೀ ಮಠಾಧೀಶರಿಗೆ ಭವ್ಯ ಸ್ವಾಗತ

Pinterest LinkedIn Tumblr

ಮಂಗಳೂರು :  ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ತಿರುಪತಿ ಶ್ರೀ ಪದ್ಮಾವತಿ ದೇವಸ್ಥಾನ , ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಶ್ರೀನಿವಾಸ ಮಂಗಾಪುರ , ಶ್ರೀ ಗೋವಿಂದರಾಯ ಸ್ವಾಮಿ ದೇವಸ್ಥಾನ , ಶ್ರೀ ಕಪಿಲತೀರ್ಥ ದೇವಸ್ಥಾನ ಕ್ಕೆ ಭೇಟಿ ನೀಡಿದರು ಬಳಿಕ ಶ್ರೀ ದೇವರ ದರ್ಶನ ಪಡೆದರು.

ತಿರುಮಲ ತಿರುಪತಿ ದೇವಸ್ವಂ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿ ತಿರುಮಲ ದೇವಳದ ವತಿಯಿಂದ ಶ್ರೀಗಳವರಿಗೆ ಸಕಲ ಗೌರವ , ಆದರಾತಿಥ್ಯ ದೊಂದಿಗೆ ದೇವಳಕ್ಕೆ ಬರಮಾಡಿಕೊಳ್ಳಲಾಯಿತು .

ಶ್ರೀ ಪದ್ಮಾವತಿ ದೇವಸ್ಥಾನ ಸಂದರ್ಶಿಸಿದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಮತ್ತು ಮನುಕುಲದ ಕ್ಷೇಮಾಭಿವೃದ್ಧಿಗಾಗಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಗಳವರ ಜೊತೆಯಲ್ಲಿ, ತಿರುಮಲ ಕಾಶಿ ಮಠದ ಕಾರ್ಯದರ್ಶಿ ಕಾಪು ನಾರಾಯಣ ಶೆಣೈ , ಕೊಚ್ಚಿ ವಿಶ್ವನಾಥ್ ಭಟ್ , ಬೆಂಗಳೂರು ಶ್ರೀ ಕಾಶಿ ಮಠ ದ ವ್ಯವಸ್ಥಾಪಕ ಸಮಿತಿಯ ರವಿಶಂಕರ್ ಪ್ರಭು, ಯೋಗೇಶ್ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು .

Comments are closed.