ಮನೋರಂಜನೆ

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ವೀಡಿಯೊ ಸಾಕ್ಷಿ ತನ್ನ ಬಳಿ ಇದೆ ಎಂದು ಹೊಸ ಬಾಂಬ್ ಸಿಡಿಸಿದ ನಟಿ ಶೃತಿ ಹರಿಹರನ್

Pinterest LinkedIn Tumblr

ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೃತಿ, ನನ್ನ ಬಳಿಯೂ ವಿಡಿಯೋ ಸಾಕ್ಷಿ ಇದೆ. ಅದನ್ನು ನಾನು ಕೋರ್ಟ್ ಗೆ ನೀಡಿದ್ದೇನೆ. ಹೀಗಾಗಿ ಮಾಧ್ಯಮಗಳ ಮುಂದೆ ನಾನು ಅದನ್ನು ವಿಡಿಯೋ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಶೃತಿ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಈ ಸಂಬಂಧ ಇಂದು ತಮ್ಮ ವಕೀಲರೊಂದಿಗೆ ಮಹಿಳಾ ಆಯೋಗಕ್ಕೆ ಬಂದ ಶೃತಿ ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನು ಸುದ್ದಿಗೋಷ್ಠಿ ವೇಳೆ ಶೃತಿ ಹರಿಹರನ್ ಮಾಧ್ಯಮದವರ ಮುಂದೆ ಮೊಂಡಾಟ ಪ್ರದರ್ಶಿಸಿದ್ದಾರೆ. ನಿಮಗೆ ಪ್ರಚಾರಬೇಕಾದಾಗ ಮಾಧ್ಯಮದವರುಬೇಕು ಇಲ್ಲದಿದ್ದರೆ ನೀವೂ ಮಾಧ್ಯಮಗಳನ್ನು ನಿಂದಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಶೃತಿ ಪ್ರೆಸ್ ಲೋಗೋಗಳನ್ನು ಕೆಳಗೆ ತಳ್ಳುವಂತೆ ಮಾಡಿದರು.

ಅಲ್ಲದೆ ಮಾಧ್ಯಮದವರನ್ನು ಇರುವೆಗಳಿಗೆ ಹೋಲಿಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಕ್ಕೆ ಕ್ಷಮೆಯಾಚಿಸಿದ ಶೃತಿ ನಾನು ಯಾರನ್ನು ನಿಂದಿಸುತ್ತಿಲ್ಲ. ನಾನು ಮಾಧ್ಯಮಗಳನ್ನು ಇರುವೆಗೆ ಹೋಲಿಸಲಿಲ್ಲ ಎಂದು ಹೇಳಿದ್ದಾರೆ.

Comments are closed.