ಯಕ್ಷಾಂಗಣದಿಂದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ

ಮಂಗಳೂರು: ‘ಯಕ್ಷಗಾನ ಪಂಡಿತ-ಪಾಮರರನ್ನು ರಂಜಿಸುವ ಕಲೆ.ಅದಕ್ಕಾಗಿ ದುಡಿದ ಹಿರಿಯರು ಪ್ರಾತ:ಸ್ಮರಣೀಯರು.ಅಂಥವರನ್ನು ಸ್ಮರಿಸುವ ಕಾರ್ಯ ಸ್ತುತ್ಯ.ಯಕ್ಷಾಂಗಣವು ತಾಳಮದ್ದಳೆಯ ರಸಾಸ್ವಾದನೆ ನೀಡುವುದರೊಂದಿಗೆ ಪ್ರತೀ ವರ್ಷ ಯಕ್ಷಗಾನ ರಂಗದ ಸಾಧಕರಿಗೆ ಗೌರವ ಸಲ್ಲಿಸುತ್ತಿರುವುದು ಅಭಿನಂದನೀಯ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ ಡಿ ಎಮ್ ಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಆರನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2018’ ದ ಎರಡನೇ ದಿನ ಹಿರಿಯ ಯಕ್ಷಗಾನ ಹಾಸ್ಯಗಾರ ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.

ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಲ.ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ನುಡಿನಮನ ಸಲ್ಲಿಸಿದರು.
*ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸನ್ಮಾನ*:
ಇತ್ತೀಚೆಗೆ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಉದ್ಯಮಿ -ಶಿಕ್ಷಣ ಪ್ರೇಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಅಭಿನಂದನಾ ಪತ್ರ ವಾಚಿಸಿದರು. ಬೋಳಾರ ನಾರಾಯಣ ಶೆಟ್ಟಿ ಸ್ಮಾರಕ ಟ್ರಸ್ಟ್ ಸಂಚಾಲಕ ಬೋಳಾರ ಕರುಣಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಅಳಪೆ ಕರ್ಮಾರ್ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್.ಕೊಟ್ಟಾರಿ,ಬೊಂಡಾಲ ಸೀತಾರಾಮ ಶೆಟ್ಟಿ ಮತ್ತು ಡಾ.ಸೂರಜ್ ಶೆಟ್ಟಿ ವೇದಿಕೆಯಲ್ಲಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಎನ್.ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ಎಂ.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ನಿರೂಪಿಸಿದರು. ಸಮಿತಿ ಸದಸ್ಯರಾದ ಸುಧಾಕರ ರಾವ್ ಪೇಜಾವರ, ಉಮೇಶಾಚಾರ್ಯ ಗೇರುಕಟ್ಟೆ,ಮಧುಸೂದನ ಅಲೆವೂರಾಯ,ಪೂರ್ಣೇಶ ಆಚಾರ್ಯ ಉಪಸ್ಥಿತರಿದ್ದರು.
ಬಳಿಕ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಭಾಗವತಿಕೆಯಲ್ಲಿ ಪ್ರಸಿಧ್ಧ ಕಲಾವಿದರಿಂದ ‘ಮಾರೀಷಾ ಕಲ್ಯಾಣ’ ತಾಳಮದ್ದಳೆ ಜರಗಿತು.
20ಲಕ್ಷ ರೂಪಾಯಿ ವೆಚ್ಚದಲ್ಲಿ 34ನೇ ವಾರ್ಡನ ಕಾಂಕ್ರಿಟೀಕರಣಗೊಂಡ 1ನೇ ಅಡ್ಡ ರಸ್ತೆಯನ್ನು ಉದ್ಗಾಟನೆಯನ್ನು ಸ್ಥಳೀಯ ಹಿರಿಯ ನಾಗರಿಕರಾದ ಶ್ರೀಯುತ ಜೇರಿನ್ ಸಾಲಿನ್ ನವರು ನೇರವೆರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕರಾದ ಜೆ.ಆರ್.ಲೋಬೊರವರು ಈ ಸಂದರ್ಭದಲ್ಲಿ ಮಾತನಾಡಿ, ನನ್ನ ಅಧಿಕಾರಾವದಿಯಲ್ಲಿ ಮಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಹಾಕಿಕೊಂಡು ರಾಜ್ಯದಲ್ಲಿ ಮಂಗಳೂರನ್ನು ಒಂದು ಮಾದರಿ ನಗರವನ್ನಾಗಿ ಮಾಡಲು ಶ್ರಮ ವಹಿಸಿ ಹಲವಾರು ಮಾದರಿ ರಸ್ತೆಗಳ ಅಭಿವೃದ್ಧಿಗಳನ್ನು ಕೈಗೊಂಡಿದ್ದೇನೆ ಹಾಗೂ ನನ್ನ ಅವದಿಯಲ್ಲಿ ಮಾರ್ಕೆಟ್ ಗಳ ನವೀಕರಣ ಕಾಮಗಾರಿ ಆರಂಬಿಸಲಾಗಿದೆ.ಇನ್ನೂ ಹಲವಾರು ಕಾಮಗಾರಿಗಳು ಮಂಜುರಾತಿಯ ಹಂತದಲ್ಲಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀಮತಿ ಸಭೀತಾ ಮಿಸ್ಕಿತ್ ವಾರ್ಡ ಅಧ್ಯಕ್ಷರಾದ ಜೇಮ್ಸ್ ಪ್ರವೀಣ್ ಡಿಸೋಜಾ, ನೆಲ್ಸನ್ ಮೊಂತೆರೋ.ಬ್ಯಾಪ್ಟಿಸ್ಟ್ ,ಸುರೇಶ್ ಕದ್ರಿ , ಜಯಕರ ಸಮರ್ಥ, ಸಿರಿಲ್ ಫರ್ನಾಂಡಿಸ್ ನೋರ್ಬಟ್ ಕ್ರಾಸ್ಟ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Comments are closed.