ಮನೋರಂಜನೆ

ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ದೇಶಕ್ಕೆ ಅಪಾಯ: ರಜನಿಕಾಂತ್​​

Pinterest LinkedIn Tumblr


ಚೆನ್ನೈ: ಪ್ರಧಾನಿ ಮೋದಿ ವಿರುದ್ಧ ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಭಾರೀ ಅಪಾಯ ಎಂದು ಸೂಪರ್​​ ಸ್ಟಾರ್​​ ರಜನಿಕಾಂತ್ ಹೇಳಿದ್ದಾರೆ. ಅಲ್ಲದೇ ಬಿಜೆಪಿ ವಿರುದ್ಧ ಕಾಂಗ್ರೆಸ್​​ ಸೇರಿದಂತೆ ವಿಪಕ್ಷಗಳ ಮಹಾಘಟ್​​ ಬಂಧನ್​​ ದೇಶಕ್ಕೆ ಮಾರಕ. ಪ್ರಧಾನಿ ನರೇಂದ್ರ ಮೋದಿ ವಿರೋಧಿ ಪಡೆ ಕಟ್ಟುವುದು ಸರಿಯಲ್ಲ ಎನ್ನುವ ಮೂಲಕ ಕೊನೆಗೂ ತಾವು ಎನ್​​ಡಿಎ ಸರ್ಕಾರದ ಪರವಾಗಿ ನಿಲ್ಲುವುದಾಗಿ ನಟ & ರಾಜಕಾರಣಿ ರಜನಿಕಾಂತ್​​ ಸುಳಿವು ನೀಡಿದ್ಧಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​​ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಮಹಾಘಟ್​​ ಬಂಧನಕ್ಕೆ ಮುಂದಾಗಿವೆ. ಹೀಗಾಗಿ ಮೋದಿ ವಿರುದ್ಧ ಕಟ್ಟಲು ಹೊರಟಿರುವ ವಿಪಕ್ಷಗಳ ಪಡೆಗೆ ನಿಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ನಟ ರಜನಿಕಾಂತ್​​​ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಬಿಜೆಪಿ ವಿರುದ್ಧ ಯಾಕೇ ವಿಪಕ್ಷಗಳು ಒಗ್ಗಟ್ಟಾಗುತ್ತಿವೆಯೋ? ಗೊತ್ತಿಲ್ಲ. ಆದರೆ ಮೋದಿಗಿಂತ ಮಹಾಘಟ್​ ಬಂಧನವೇ ಭಾರೀ ಅಪಾಯ ಎಂದು ರಜನಿಕಾಂತ್​​​ ಹೇಳಿಕೆ ನೀಡಿದ್ದಾರೆ.

ಬಿಜೆಪಿಯನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆ ನೀಡಿರುವ ನಟ ರಜನಿಕಾಂತ್​​ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ದೇಶದ ರಾಜಕಾರಣದಲ್ಲಿ ರಜನಿಕಾಂತ್​​ ಹೇಳಿಕೆಯ ಸುತ್ತ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ರಾಜಕಾರಣಿ ಕಮಲ್​​ ಹಾಸನ್​​ ನುಡಿದಂತಯೇ ರಜನಿಕಾಂತ್​​ ಮತ್ತು ಬಿಜೆಪಿ ಸಿದ್ದಾಂತಕ್ಕೆ ಹೊಂದಾಣಿಕೆಯಾಗುತ್ತಿದೆ. ಬಹುಶಃ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಜನಿ ಬಿಜೆಪಿಗೆ ಬೆಂಬಲಿಸಬಹುದು ಎಂಬ ಮಾತಿಗಳು ಬಲವಾಗಿ ಕೇಳಿ ಬರುತ್ತಿವೆ.

ಯಾರಿಗೆ ರಜನಿ ಬೆಂಬಲ?: ಆರಂಭದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದಾಗ ರಜನಿಕಾಂತ್​ ಅವರು, ಅಧಿಕಾರದಲ್ಲಿರುವ ಎಐಎಡಿಎಂಕೆ ಪಕ್ಷವನ್ನು ಬೆಂಬಲಿಸಬೇಕಾ ಅಥವಾ ಆಡಳಿತ ಚುಕ್ಕಾಣಿ ಹಿಡಿಯಲು ತವಕಿಸುತ್ತಿರುವ ಡಿಎಂಕೆ ಪಕ್ಷಕ್ಕೆ ಬೆಂಬಲ ನೀಡಬೇಕಾ ಎಂಬ ಗೊಂದಲದಲ್ಲಿದ್ದರು. ಇಂಥಹದೊಂದು ಅಸ್ಪಷ್ಟ ನಿಲುವಿನ ಮಧ್ಯೆಯೇ ರಜನಿ ರಾಜಕೀಯಕ್ಕೆ ಪ್ರವೇಶಿಸಿದ್ದರು. ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕೆ ನಾನಾ ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಬೆಂಬಲ ನೀಡಬಹುದು ಎಂದು ಹಲವು ಸಲಹೆಗಳ ಕೂಡ ಬಂದವು.

ದಕ್ಷಿಣ ಭಾರತದ ಸೂಪರ್ ಸ್ಟಾರ್, ಕನ್ನಡಿಗ 67 ವರ್ಷದ ರಜನಿಕಾಂತ್ ಅವರು ಡಿಸೆಂಬರ್ 31ರಂದು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿ ಸಂಚಲನವನ್ನು ಉಂಟು ಮಾಡಿದರು. “ಯುದ್ಧದಲ್ಲಿ ಭಾಗವಹಿಸುವುದೇ ಆದರೆ, ಅದನ್ನು ಗೆಲ್ಲಲೆಂದೇ ಯುದ್ಧಕ್ಕೆ ಇಳಿಯಬೇಕು” ಎಂದು ರಜನಿಕಾಂತ್ ತಮ್ಮ ಸಹಸ್ರಾರು ಅಭಿಮಾನಿಗಳ ಎದುರು ವಿಶ್ವಾಸದಿಂದ ಹೇಳಿದ್ದರು. ಬಳಿಕ ಸ್ವತಂತ್ರ ಪಕ್ಷ ಕಟ್ಟುವ ಮೂಲಕ ಸಕ್ರಿಯರಾಗಿ ರಾಜಕೀಯಕ್ಕೆ ಧುಮುಕಿದರು.

ಬಿಜೆಪಿ ವಿರುದ್ಧ ಎಂದೂ ಗುಟುರದ ರಜನಿ: ರಜನಿಕಾಂತ್ ಅವರು ಮತ್ತೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಕಮಲ್ ಹಾಸನ್ ಅವರಂತೆ ಭಾರತೀಯ ಜನತಾ ಪಕ್ಷದ ವಿರುದ್ಧ ಬಹಿರಂಗವಾಗಿ ಗುಟುರು ಹಾಕಿಲ್ಲ. ಜೊತೆಗೆ ತಾವು ಇಂಥಹುದೇ ಸಿದ್ಧಾಂತಕ್ಕೆ ಮನ್ನಣೆ ನೀಡುವುದಾಗಿ ಎಂದು ಸ್ಪಷ್ಟವಾಗಿ ತಿಳಿಸಿರಲಿಲ್ಲ. ಆದ್ದರೀಗ ಅವರು ಕಾಂಗ್ರೆಸ್​​ ಸೇರಿದಂತೆ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಬಿಜೆಪಿಗೆ ಬೆಂಬಲ ನೀಡುವುದಾಗಿ ಪರೋಕ್ಷವಾಗಿ ತಿಳಿಸಿದ್ಧಾರೆ.

ಬಿಜೆಪಿಗೆ ಮೋದಿ ಆಹ್ವಾನ: ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಲವಾರು ಬಾರಿ ರಜನಿಕಾಂತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಬಿಜೆಪಿಗೆ ಸೇರುವಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ರಜನಿಕಾಂತ್ ಅವರು ಭಾರತೀಯ ಜನತಾ ಪಕ್ಷ ಸೇರುವುದೇ ಆದರೆ, ಅವರಿಗೆ ಎಂದಿಗೂ ಮುಖ್ಯದ್ವಾರ ತೆರದಿರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಮುಕ್ತ ಹೇಳಿಕೆ ನೀಡಿದ್ದರು. ಇದಕ್ಕೆ ರಜನಿಯವರದ ಮೌನದ ನಗುವೇ ಉತ್ತರವಾಗಿತ್ತು.

Comments are closed.