ಕರಾವಳಿ

ಕಿರಿಯ ಶ್ರೀಗಳಿಗೆ ಜವಬ್ದಾರಿ ಹಸ್ತಾಂತರಿಸಿದ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು

Pinterest LinkedIn Tumblr

ಉಡುಪಿ: ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರು ಶನಿವಾರ ತಮ್ಮ ಶಿಷ್ಯರಾದ ಶ್ರೀ ಈಶಪ್ರಿಯ ತೀರ್ಥರನ್ನು ಅದಮಾರು ಮಠದ ಉತ್ತರಾಧಿಕಾರಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಅವರು ಶನಿವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾನು ಒಂದು ಯೋಗ್ಯ ಶಿಷ್ಯ ಬೇಕೆಂದು ಅನಂತಾಸನ ದೇವರಲ್ಲಿ‌ ಬೇಡಿಕೊಂಡಿದ್ದೆ. ಅದನ್ನು ಕರುಣಿಸಿದ್ದಾನೆ. ಈಗ ನನಗೆ ೬೦ ವರ್ಷ ಪ್ರಾಯ. ಹಾಗಾಗಿ ಮಠದ ಕಾರ್ಯಭಾರವನ್ನು ಅವರಿಗೆ ನೀಡುತ್ತಿದ್ದೇನೆ. ವೈದಿಕತನ ವಿದ್ದರೆ ಮಾತ್ರ ಸಾಲದು ಅದನ್ನು ಲೌಕಿಕ ಜನರಿಗೆ ತಿಳಿಸಿಕೊಡಬೇಕು. ಈಗ ಈಶಪ್ರಿಯರಿಗೆ ಲೌಕಿಕ ಹಾಗೂ ವೈದಿಕದ ಎರಡರ ಜ್ಞಾನವಿದೆ. ನಮ್ಮ ಶಿಷ್ಯರ ಬಗ್ಗೆ ಹೆಮ್ಮೆ ಇದೆ. ನಾನು ಕೂಡ ಮಾರ್ಗ ದರ್ಶಿಯಾಗಿರುತ್ತೇನೆ.

ಹಣಕಾಸು ನಿರ್ವಹಣೆ, ಪೂಜೆ, ಗುರುಮಠದ ಭೇಟಿ, ಫಲ ಮಂತ್ರಾಕ್ಷತೆ ಕೊಡುವುದು ಪೀಠಾಧಿಪತಿಯ ಜವಾಬ್ದಾರಿ. ಈಶಪ್ರಿಯರು ಅದಮಾರು ಪಾರಂಪರ್ಯದ ಈ ೩೩ ನೇ ಯತಿ. ಹಿರಿಯ ಯತಿಗಳು ಬದುಕಿದ್ದಾಗಲೇ ಅಧಿಕಾರವನ್ನು ತಮ್ಮ ಕಿರಿಯರಿಗೆ ಕೊಡಬೇಕು. ಇದು ಮನೆ-ಮನೆಗೆ ನೀಡುವ ಸಂದೇಶವಾಗಬೇಕು. ಜೂನ್ 19, 2014 ರಲ್ಲಿ ದುರ್ಗ ಬೆಟ್ಟದಲ್ಲಿ ಈಶ ಪ್ರಿಯ ತೀರ್ಥರನ್ನು ಶಿಷ್ಯರನ್ನಾಗಿ ಸ್ವೀಕಾರ ಮಾಡಲಾಗಿದೆ. ವಿಶ್ವಪ್ರಿಯರು 1972 ರಲ್ಲಿ ಶಿಷ್ಯ ಸ್ವೀಕಾರ ಪಡೆದುಕೊಂಡರು. ಒಬ್ಬ ಶಿಷ್ಯ ಸ್ವೀಕರಿಸಿದಾಗಲೇ ಆತ ಉತ್ತರಾಧಿಕಾರಿಯಾಗುತ್ತಾನೆ. ಸ್ವಲ್ಪ ಪ್ರಬುದ್ದತೆ ಪಡೆದಾಗ ಆತ ಜವಾಬ್ದಾರಿಯನ್ನು ಹೊರಲು ಯೋಗ್ಯವಾಗುತ್ತಾನೆ ಎಂದರು.

ಬರೀ ಪ್ರತಿಮೆಯನ್ನು ಪೂಜಿಸುವುದು ಮಾತ್ರ ದೇವರ ಕೆಲಸ ಅಲ್ಲ. ಜನರ ಸೇವೆ ಮಾಡುವುದು ಕೂಡ ದೇವರನ್ನ ಕಂಡು ಕೊಳ್ಳಹುದು. ನನ್ನ ಶಿಷ್ಯ ಇನ್ನು 12 ವರ್ಷ‌ ಅಧ್ಯಯನಕ್ಕಾಗಿ ನೀಡಬೆಕು.

ಈ ಸಂದರ್ಭದಲ್ಲಿ, ಈಶ ಪ್ರಿಯ ತೀರ್ಥರು ಮಾತನಾಡಿ, ಅಂದು ರಾಮ ಭರತನಿಗೆ ಆಡಳಿತ ನಡೆಸುವಂತೆ ಹೇಳಿ ಕಾಡಿಗೆ ಹೋದ. ಹಾಗೆಯೇ ಹಿರಿಯ ಮಠಾಧಿಪತಿಗಳು ಈಗ ನನಗೆ ಜವಾಬ್ದಾರಿ ವಹಿಸಿದ್ದು ತುಂಬ ಸಂತೋಷವಾಗಿದೆ. ಎಲ್ಲರೂ ಕೀರ್ತಿಗಾಗಿ ಆಸೆ ಪಡುತ್ತಾರೆ. ಆದರೆ ಅದಮಾರು ಮಠದ ಸ್ವಾಮಿಜಿ ಇಲ್ಲಿ ಸ್ವಲ್ಪ ಭಿನ್ನ. ಅಧಿಕಾರಾವಧಿ ಮುಗಿಯುವ ಪೂರ್ವವೇ ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದಾರೆ.
ಈ ನಿರ್ದಾರ ಸಮಾಜಕ್ಕೆ ಸಂದೇಶವಾಗಲಿ. ಹಿರಿಯರನ್ನು ಕೇಳದೆ ಯಾವುದೆ ಕೆಲಸ ಮಾಡಲಾರೆ ಮತ್ತವರ ಮಾರ್ಗದರ್ಶನ ದಂತೆ ನಡೆಯುತ್ತೇನೆ. ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷರಾಗಿ ಕೆಲಸ ನಿಭಾಯಿಸುತ್ತೇನೆ.

Comments are closed.