
ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ನಿನ್ನೆಯಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಮಂದಿ ಟ್ರೈಲರ್ ವೀಕ್ಷಣೆ ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಏತನ್ಮಧ್ಯೆ ಚಿತ್ರದ ಟ್ರೈಲರ್ ಗೆ ಕೇವಲ ಅಭಿಮಾನಿಗಳು ಮಾತ್ರವಲ್ಲ ಕನ್ನಡ ಚಿತ್ರರಂಗದ ಸ್ಚಾರ್ ನಟ ಸುದೀಪ್ ಕೂಡ ಬೆರಗಾಗಿದ್ದು, ಚಿತ್ರ ತಂಡದ ಕೆಲಸಕ್ಕೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಚಿತ್ರದ ಟ್ರೈಲರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಸುದೀಪ್, ಈ ಟ್ರೈಲರ್ ಲಾವಾರಸ ಉಕ್ಕಿ ಬಂದಂತಿಂದೆ ಎಂದು ಹೇಳಿದ್ದಾರೆ. ಅಂತೆಯೇ ನಿರ್ದೇಶಕ ಪ್ರಶಾಂತ್ ರಾಜ್ ಈ ಚಿತ್ರವನ್ನು ಬೇರೆಯದ್ದೇ ಹಂತಕ್ಕೆ ಕೊಂಡೊಯ್ದಿದ್ದಾರೆ. ಒಟ್ಟಾರೆಯಾಗಿ ಯಶ್ ಲುಕ್ಕಿಗೆ ಫಿದಾ ಆಗಿರೋದಾಗಿಯೂ ಟ್ವಿಟ್ಟರ್ ಮೂಲಕ ಬರೆದುಕೊಂಡಿದ್ದಾರೆ.
Comments are closed.