ಕರಾವಳಿ

ದತ್ತು ಮಗುವಿಗಾಗಿ ವೆಬ್ ಸೈಟ್ ಮೊರೆಹೋದ ಉಡುಪಿ ಮಹಿಳೆ; 9 ಲಕ್ಷ ಪಂಗನಾಮ!

Pinterest LinkedIn Tumblr

ಉಡುಪಿ: ದತ್ತು ಮಗುವನ್ನು ಕಾನೂನು ಬದ್ಧವಾಗಿ ನೀಡುವ ಆಮಿಷವನ್ನು ವೆಬ್ ಸೈಟ್ ಮೂಲಕ ನೀಡಿ ಮಹಿಳೆಯೋರ್ವರಿಂದ ಬರೋಬ್ಬರಿ 9 ಲಕ್ಷ ಪಡೆದು ವಂಚಿಸಿದ ಘಟನೆ ಕಾಪು ತಾಲೂಕಿನ ಉಚ್ಚಿಲದ ಮೂಳೂರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹಸೀನಾ (39) ಮೋಸಕ್ಕೊಳಗಾದವರಾಗಿದ್ದು ಸದ್ಯ ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)

ಹಸೀನಾ ಅವರು ದತ್ತು ಮಗುವಿಗಾಗಿ ಅ.20ರಂದು ಮೊಬೈಲ್ ವೆಬ್ ಸೈಟಿನಲ್ಲಿ ಸರ್ಚ್‌ ಮಾಡುತ್ತಿರುವಾಗ ಇಂಗ್ಲೆಂಡ್‌ನಿಂದ ಒಂದು ಹೆಣ್ಣು ಮಗುವನ್ನು ಅಲ್ಲಿನ ಕಾನೂನಿನ ಪ್ರಕಾರ ದತ್ತುಕೊಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಅದರಂತೆಯೇ ತನ್ನ ವಿಳಾಸ, ದೂರವಾಣಿ ವಿವರಗಳನ್ನು ಸಲ್ಲಿಸಿದ್ದು, ಆ ಬಳಿಕ ಅ.25ರಂದು 8929595545 ನೇ ಸಂಖ್ಯೆಯಿಂದ ಕರೆ ಬಂದು ‘ಮಗುವಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಇಂಗ್ಲೆಂಡ್‌ನಿಂದ ಪಾರ್ಸೆಲ್ ಕಳುಹಿಸುವುದಾಗಿಯೂ, ಇದನ್ನು ಡೆಲಿವರಿ ನೀಡಬೇಕಾದರೆ 40,000 ಹಣವನ್ನು ಪಾವತಿ ಮಾಡಬೇಕೆಂದು ತಿಳಿಸಿದ್ದರು. ಅಂತೆಯೇ ಆ ಮೊತ್ತವನ್ನು ಅ. 26ರಂದು ತನ್ನ ಕಾಪುವಿನ ಸಿಂಡಿಕೇಟ್ ಬ್ಯಾಂಕ್ ಶಾಖೆ ಖಾತೆ ಮೂಲಕ ಕೃಷ್ಣ ಕುಮಾರ್ ಎಂಬಾತನ ಇಂಡಿಯನ್ ಬ್ಯಾಂಕ್ ಹಣ ಜಮಾ ಮಾಡಿದ್ದರು.

ಆ ನಂತರವೂ ಆರೋಪಿಗಳಾದ ಗಗನ್ ಗರ್ಗ್, ರಮಣ ಪ್ರೀತ್ ಕೌರ್, ಜಸ್ ಮೀನ್ ಸುಲ್ತಾನ್, ದೊಕೆನೋ ಪಾವ್, ಜಹರುಲ್ ಹಕ್ ಮತ್ತು ಏರೋನ್ ಗಜ್ ಲಿಂಗ್ ಎನ್ನುವವರು ಹಸೀನಾ ಅವರಿಗೆ ಕರೆ ಮಾಡಿ ಇಂಗ್ಲೆಂಡ್ನಿಂದ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಇಂಗ್ಲೆಂಡಿನ ಪೌಂಡ್ಸ್ ಗಳಿವೆ ಹಾಗಾಗಿ ಅದನ್ನು ಬಿಡಿಸಿಕೊಳ್ಳಲು ಹಣ ಪಾವತಿ ಮಾಡಬೇಕು ಇಲ್ಲದಿದ್ದರೆ ತಮ್ಮ ಮೇಲೆ ಕೇಸು ದಾಖಲಿಸುವುದಾಗಿ ಬೆದರಿಸಿ, ದತ್ತು ಮಗುವನ್ನು ಕೊಡದೆ ಮತ್ತು ಪಾರ್ಸೆಲ್‌ನ್ನು ಕಳುಹಿಸದೆ ಪಿರ್ಯಾದಿ ಹಸೀನಾ ರಿಂದ ಒಟ್ಟು ಮೊತ್ತ ರೂ.9,00,000/-ವನ್ನು ಆರೋಪಿಗಳ ಖಾತೆಗೆ ಆನ್‌ಲೈನ್ ಮುಖೇನ ಜಮಾ ಮಾಡಿಸಿ ಮೋಸ, ವಂಚನೆ ನಡೆಸಿದ್ದರು.

ಈ ಬಗ್ಗೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದ ಮಹಿಳೆ ಉಡುಪಿ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕ್ರಣ ದಾಖಲು ಮಾಡಿಕೊಳ್ಳಲಾಗಿದೆ.

Comments are closed.