ಅಂತರಾಷ್ಟ್ರೀಯ

ವ್ಯಕ್ತಿಯೊಬ್ಬ ಒಂದು ಗಂಟೆಗಳ ಕಾಲ ಕಣ್ಣಿನಲ್ಲಿ ರಕ್ತ!

Pinterest LinkedIn Tumblr


‘ರಕ್ತ ಕಣ್ಣೀರು’ ಎಂದರೆ ಎಲ್ಲರಿಗೂ ಉಪೇಂದ್ರ ಅಭಿನಯದ ಸಿನಿಮಾ ಕಣ್ಮುಂದೆ ಬರುತ್ತದೆ. ನೆತ್ತರ ಕಣ್ಣೀರು ಎಂಬುದು ಒಂದು ಕಲ್ಪನೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇಂಗ್ಲೆಂಡ್​ನಲ್ಲಿ ವ್ಯಕ್ತಿಯೊಬ್ಬರು ರಕ್ತ ಕಣ್ಣೀರು ಸುರಿಸಿದ್ದಾರೆ. ಅದು ಸತತ ಒಂದು ಗಂಟೆಗಳ ಕಾಲ. ಅಚ್ಚರಿಯಾದರೂ ಇದು ಸತ್ಯ.

52 ವರ್ಷದ ವ್ಯಕ್ತಿಯೊಬ್ಬರ ಕಣ್ಣಿಂದ ಇದ್ದಕ್ಕಿದಂತೆ ನೆತ್ತರು ಸುರಿಯಲು ಆರಂಭಿಸಿದೆ. ಮೊದಲಿಗೆ ಇದನ್ನು ಗಮನಿಸಿದ ಈ ವ್ಯಕ್ತಿ ಸೀದಾ ಕೋಣೆಗೆ ಹೋಗಿ ಪರೀಕ್ಷಿಸಿದ್ದಾರೆ. ಈ ವೇಳೆ ಕಣ್ಣಿಂದ ರಕ್ತ ಸುರಿಯುತ್ತಿರುವುದು ಗೊತ್ತಾಗಿದೆ. ಆದರೆ ರಕ್ತ ಬರುವಾಗ ಯಾವುದೇ ನೋವು ಆಗುತ್ತಿರಲಿಲ್ಲ. ಕಣ್ಣಿನ ಗುಡ್ಡೆಗಳು ಚಲಿಸುತ್ತಿದ್ದಂತೆ ಕಣ್ಣಲ್ಲಿ ರಕ್ತ ಚಿಮ್ಮುತ್ತಿತ್ತು. ಒಂದು ಗಂಟೆಗಳ ಕಾಲ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ.

ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ವೈದ್ಯರು ಕೂಡ ಒಂದು ಬಾರಿ ದಂಗಾಗಿದ್ದಾರೆ. ನಂತರ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ವ್ಯಕ್ತಿಯ ಕಣ್ಣುಗಳಿಗೆ ಅಪರೂಪದ haemolacria ಖಾಯಿಲೆಗೆ ತುತ್ತಾಗಿರುವುದು ಪತ್ತೆಯಾಯಿತು. ಕಣ್ಣಿನ ಸೋಂಕುಗಳು, ಉರಿಯೂತ ಅಥವಾ ಸುತ್ತಲಿನ ರಚನೆಗಳ ಗೆಡ್ಡೆಗಳಿಂದ ಈ ರೀತಿಯಾಗಿ ರಕ್ತಸ್ರಾವವಾಗುತ್ತದೆ. ಇದೇ ಸಮಸ್ಯೆಯಿಂದ ರಕ್ತ ಕಣ್ಣೀರು ಸುರಿಯುತ್ತಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ ಎಂದು ಇಂಗ್ಲೆಂಡ್ ಜರ್ನಿ ಆಫ್ ಮೆಡಿಸಿನ್​ನಲ್ಲಿ ಪ್ರಕಟಿಸಲಾದ ವರದಿಯಲ್ಲಿ ತಿಳಿಸಲಾಗಿದೆ.

ಈ ಖಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಕಣ್ಣಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕೂಡ ಇದೆಯಂತೆ. ಸದ್ಯ ರಕ್ತ ಕಣ್ಣೀರಿನ ವ್ಯಕ್ತಿಗೆ ಐ ಡ್ರಾಪ್ಸ್​ಗಳನ್ನು ನೀಡಲಾಗಿದ್ದು, ಈ ಔಷಧಗಳಿಂದ ಕಣ್ಣಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಒಂದು ವರ್ಷದವರೆಗೆ ಚಿಕಿತ್ಸೆ ಮುಂದುವರೆಸಿದರೆ ಈ ಸಮಸ್ಯೆಯು ಬಗೆಹರಿಸಿಕೊಳ್ಳಬಹುದು ಎಂದು ತನ್ನ ವೈದ್ಯರು ತಿಳಿಸಿದ್ದಾರೆ.

Comments are closed.