
ಕನಸಿನ ಕನ್ಯೆ ಮಾಲಾಶ್ರೀ ಡಾ.ರಾಜಕುಮಾರ್ ಅವರ ಹೋಮ್ ಬ್ಯಾನರ್ನಲ್ಲಿ ರಾಘವೇಂದ್ರ ರಾಜಕುಮಾರ್ ಜೊತೆಗೆ “ನಂಜುಂಡಿ ಕಲ್ಯಾಣ’ ಚಿತ್ರದಿಂದ ಚಂದನವನಕ್ಕೆ ಎಂಟ್ರಿಕೊಟ್ಟು, ರಾಘಣ್ಣನೊಟ್ಟಿಗೆ ತೆರೆ ಹಂಚಿಕೊಂಡಿದ್ದ ಮಾಲಾಶ್ರೀ ನೋಡ ನೋಡುತ್ತಲೆ ಸ್ಯಾಂಡಲ್ವುಡ್ನಲ್ಲಿ ಭದ್ರ ಸ್ಥಾನ ಪಡೆದುಕೊಂಡರು.
ಹೀಗಿರುವಾಗಲೇ ಮಾಲಾಶ್ರೀ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹೌದು! ಮಾಲಾಶ್ರೀ ಅವರು ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಯಾವ ಫೋಟೋ ಅಂದ್ರೆ ಪವರ್ಸ್ಟಾರ್ ಪುನೀತ್ರಾಜಕುಮಾರ್ ಯೌವ್ವನದಲ್ಲಿದ್ದಾಗ ಮಾಲಾಶ್ರೀಯೊಟ್ಟಿಗೆ ಇರುವ ಫೋಟೋವೊಂದನ್ನು ಹರಿಬಿಟ್ಟಿದ್ದಾರೆ.
ಅಲ್ಲದೇ ಫೋಟೋದಲ್ಲಿ ಮಾಲಾಶ್ರೀ ಮುದ್ದು ಕಂದನನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದರೆ, ಅವರ ಪಕ್ಕದಲ್ಲಿ ಪವರ್ ಸ್ಟಾರ್ ಕುಳಿತಿದ್ದಾರೆ. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪುನೀತ್ ಹಾಗೂ ಮಾಲಾಶ್ರೀ ಅಭಿಮಾನಿಗಳು ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವಂತಹ ತರಹೇವಾರಿ ಕಮೆಂಟ್ಗಳು ವ್ಯಕ್ತವಾಗಿವೆ.
Comments are closed.