ರಾಷ್ಟ್ರೀಯ

ಕಾಶ್ಮೀರದ ವಿದ್ಯಾರ್ಥಿಗಳು ದೀಪದ ಬೆಳಕಿನಲ್ಲೆ ಪರೀಕ್ಷೆ ಬರೆದಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಕಣಿವೆ ರಾಜ್ಯ ಕತ್ತಲಲ್ಲಿ ಮುಳುಗಿದೆ.

ಭಾರೀ ಹಿಮ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಸಂಪರ್ಕ ಕಳೆದುಕೊಂಡಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಹಿಮಮಳೆಗೆ ವಿದ್ಯುತ್​ ಸಂಪರ್ಕ ಕಡಿತಗೊಂಡಿದ್ದು, ವಿದ್ಯಾರ್ಥಿಗಳು ಕತ್ತಲಲ್ಲಿಯೇ ಪರೀಕ್ಷೆ ಬರೆದಿದ್ದಾರೆ. ಇನ್ನು ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಹರಸಾಹಸ ನಡೆಸುತ್ತಿದ್ದಾರೆ.

ಹಿಮಪಾತದಿಂದ ಮರದ ಕೊಂಬೆಗಳು ವಿದ್ಯುತ್​ ತಂತಿ ಮೇಲೆ ಮುರಿದು ಬೀಳುತ್ತಿದೆ, . ಟ್ರಾನ್ಸ್​ಫಾರ್ಮರ್​ ಗೆ ವಿದ್ಯುತ್​ ಸರಬರಾಜು ಆಗುವಲ್ಲಿ ಅಡ್ಡಿಯುಂಟಾಗಿದ್ದು, 1300 ಮೆಗಾವ್ಯಾಟನಿಂದ 50 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನೆಯಾಗುತ್ತಿದೆ ಎಂದು ಇಲ್ಲಿನ ಮುಖ್ಯ ಎಲೆಕ್ಟ್ರಾನಿಕ್​ ಇಂಜಿನಿಯರ್​ ತಿಳಿಸಿದ್ದಾರೆ.

ಈ ವರ್ಷದ ಮೊದಲ ಹಿಮಪಾತ ಶನಿವಾರದಿಂದ ಜಮ್ಮುವಿನಲ್ಲಿ ಶುರುವಾಗಿದ್ದು, ರಸ್ತೆಗಳಲ್ಲಿ ಹಿಮದ ರಾಶಿ ಇಂಚುಗಳವೆಗೆ ಶೇಖರಣೆಯಾಗುತ್ತಿದೆ, 2009ರ ಬಳಿಕ ಈ ಮಟ್ಟಿನ ಹಿಮಪಾತ ಈ ವರ್ಷವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಮಪಾತದಿಂದ ಮಂದಬೆಳಕು ಮೂಡಿದ್ದು, ವಿಮಾನ ಹಾರಾಟ ಕೂಡ ಸ್ಥಗಿತಗೊಳಿಸಲಾಗಿದೆ, ಹಿಮಪಾತದಲ್ಲಿ ಸಿಲುಕಿರುವ 300ಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ,. ಕಾಶ್ಮೀರದಿಂದ ಇತರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಿಮಪಾತವಾಗಿ ಭೂಕುಸಿತ ಸಂಭಿವಿಸುವ ಆತಂಕಪದಿಂದ ಬಂದ್​ ಮಾಡಲಾಗಿದೆ.

Comments are closed.