ಕುಂದಾಪುರ: ವಿಜಯ ದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪ್ರತಿ ಬಾರಿ ನಡೆಯುವ ಪಥಸಂಚಲನ ಕಾರ್ಯಕ್ರಮದಂತೆಯೇ ಈ ಬಾರಿಯೂ ಕೋಟದಲ್ಲಿ ಭಾನುವಾರ ಬೆಳಿಗ್ಗೆ ಪಥಸಂಚಲನ ನಡೆಯಿತು.


ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗಣವೇಷ (ಬಿಳಿ ಅಂಗಿ, ಕಂದು ಬಣ್ಣದ ಪ್ಯಾಂಟ್, ಕಪ್ಪು ಟೋಪಿ, ಬೆಲ್ಟ್, ಶೂ) ಧರಿಸಿ ಕೈಯಲ್ಲಿ ದಂಡ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿದರು. ಘೋಷ್ ಸಹಿತ ಕೋಟ ಮೂರುಕೈ ಪ್ರದೇಶದಿಂದ ಸಾಗಿಬಂದ ಸ್ವಯಂಸೇವಕರ ಪಥಸಂಚಲನವು ಕೋಟ ಬಸ್ ನಿಲ್ದಾಣದವರೆಗೆ ಸಾಗಿ ಬಳಿಕ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭ ಮಾತನಾಡಿದ ಕೋಟ, ಸಾಮಾನ್ಯ ಸ್ವಯಂಸೇವಕನಾಗಿ ಪಾಲ್ಘೊಂಡಿರುವೆ, ಈ ಬಗ್ಗೆ ತ್ರಪ್ತಿ ಮತ್ತು ಹೆಮ್ಮೆಯಿದೆ ಎಂದರು. ಸಂದರ್ಭ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಸಂಘಪರಿವಾರದ ಪ್ರಮುಖರು ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.