ಅಂತರಾಷ್ಟ್ರೀಯ

ಲಂಡನ್ ನಲ್ಲಿ ಮನೆಗೆಲಸದವನಿಗೆ ಚಿತ್ರಹಿಂಸೆ: ಭಾರತೀಯ ದಂಪತಿ ಬಂಧನ

Pinterest LinkedIn Tumblr


ಲಂಡನ್​: ದಕ್ಷಿಣ ಇಂಗ್ಲೆಂಡ್​ನಲ್ಲಿ ನೆಲೆಸಿರುವ ಭಾರತ ಮೂಲದ ದಂಪತಿ ತಮ್ಮ ಮನೆಯ ಕೆಲಸಕ್ಕೆಂದು ದಂಪತಿಯನ್ನು ನೇಮಕ ಮಾಡಿಕೊಂಡಿದ್ದರು. ಆದರೆ, ಅವರಿಗೆ ಸರಿಯಾದ ಊಟ ನೀಡದೆ, ಟಾಯ್ಲೆಟ್​ ವ್ಯವಸ್ಥೆಯನ್ನೂ ಕಲ್ಪಿಸದೆ ಶೆಡ್​ನಲ್ಲಿ ಸೇವಕರಂತೆ ಇರಿಸಿಕೊಂಡಿದ್ದ ಆರೋಪದಲ್ಲಿ ದಂಪತಿಯನ್ನು ಬಂಧಿಸಲಾಗಿದೆ.

ಆಧುನಿಕ ಜೀವನ ನಡೆಸುತ್ತಿದ್ದರೂ ಮನೆಯ ಕೆಲಸದವರನ್ನು ಜೀತದ ಆಳುಗಳಂತೆ ನೋಡಿಕೊಳ್ಳುತ್ತಿದ್ದ ದಂಪತಿಯ ಮೇಲೆ ಅಕ್ಕಪಕ್ಕದ ಮನೆಯವರು ದೂರು ನೀಡಿದ್ದರು. ನಾಲ್ಕು ವರ್ಷಗಳಿಂದ ತಮ್ಮ ಮನೆಯ ಗಾರ್ಡನ್​ ಪಕ್ಕ ಇರುವ ಶೆಡ್​ನಲ್ಲಿ ಕೆಲಸದಾಳನ್ನು ಇಟ್ಟುಕೊಂಡಿದ್ದ ಭಾರತ ಮೂಲದ ಪಲ್ವಿಂದರ್​ ಮತ್ತು ಪ್ರಿತ್ಪಾಲ್ ಬಿನ್ನಿಂಗ್​ ಅವರನ್ನು ಇಂಗ್ಲೆಂಡ್​ ಪೊಲೀಸರು ಬಂಧಿಸಿದ್ದಾರೆ.

ಪಲ್ವಿಂದರ್​ ದಂಪತಿಯ ಮನೆಗೆ ಕಳೆದ ವಾರ ದಾಳಿ ನಡೆಸಿದ ಯುಕೆಯ ಗ್ಯಾಂಗ್​ಮಾಸ್ಟರ್ಸ್​ ಮತ್ತು ಲೇಬರ್​ ಅಬ್ಯೂಸ್​ ಅಥಾರಿಟಿ ಸಿಬ್ಬಂದಿ ದಂಪತಿಯ ಮೇಲೆ ದೂರು ದಾಖಲಿಸಿಕೊಂಡಿದ್ದರು. ಪೋಲೆಂಡ್​ ದೇಶದ ವ್ಯಕ್ತಿಯನ್ನು ಆಳಿನಂತೆ ನಡೆಸಿಕೊಳ್ಳುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ತಿನ್ನಲು ಆಹಾರ ನೀಡಬೇಕೆಂದರೆ ಮನೆಯಲ್ಲಿ ಕೆಲಸದಾಳಾಗಿ ಇರಬೇಕೆಂದು ಆಮಿಷವೊಡ್ಡಿ, ಆತನಿಗೆ ಮೌಲಸೌಲಭ್ಯಗಳ್ಯಾವುವನ್ನೂ ನೀಡದೆ ಹಿಂಸೆ ನೀಡಲಾಗುತ್ತಿತ್ತು.

ತನಿಖೆಯ ವೇಳೆ ತನಗಾದ ಹಿಂಸೆಯನ್ನು ಹೇಳಿಕೊಂಡಿರುವ ಪೋಲೆಂಡ್​ ವ್ಯಕ್ತಿ, ನನಗೆ ಮಲಗಲು ಒಂದು ಪ್ಲಾಸ್ಟಿಕ್​ ಚೇರ್​ ನೀಡಲಾಗಿತ್ತು. ದಿನವೂ ಹಳಸಿದ ಆಹಾರ ನೀಡುತ್ತಿದ್ದರು. ಗಾಳಿ, ಬೆಳಕಿಲ್ಲದ ಶೆಡ್​ನಲ್ಲಿ ಮಲಗಲು ಅವಕಾಶ ಕೊಟ್ಟಿದ್ದರು. ಟಾಯ್ಲೆಟ್​ ವ್ಯವಸ್ಥೆಯನ್ನೂ ನೀಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

Comments are closed.