
ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಚೇಳಿಗೆ ಹೋಲಿಕೆ ಮಾಡಿದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ.
ದೆಹಲಿ ಬಿಜೆಪಿ ಉಪಾಧ್ಯಕ್ಷ ರಾಜೀವ್ ಬಬ್ಬರ್ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದು, ಐದು ಕೋಟಿ ರು ಪರಿಹಾರ ಕೋರಿದ್ದಾರೆ.
“ತರೂರ್ ಹೇಳಿಕೆಯಿಂದ ಹಿಂದೂಗಳ ಭಾವನೆಗಳಿಗೆ ನೋವಾಗಿದ್ದು, ಬಜೆಪಿ ಬೆಂಬಲಿಗರು, ನಾಯಕರು ಹಾಗು ಕಾರ್ಯಕರ್ತರಿಗೆ ಅವಮಾನವಾಗಿದೆ” ಎಂದು ಬಬ್ಬರ್ ಇದೇ ವೇಳೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತರೂರ್,. “ಈ ದೂರು ಅರ್ಥಹೀನವಾಗಿದ್ದು, ಅಭಿವ್ಯಕ್ತಿ ಸ್ವತಂತ್ರವನ್ನು ಕಸಿಯುವ ಯತ್ನವಾಗಿದೆ. ಹೀಗಾದಲ್ಲಿ ನಮ್ಮ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ?” ಎಂದು ಪ್ರಶ್ನಸಿದ್ದಾರೆ.
ಅಕ್ಟೋಬರ್ 28ರಂದು ಬೆಂಗಳೂರು ಲಿಟ್‌ಫೆಸ್ಟ್‌ನಲ್ಲಿ ತಮ್ಮ ಪುಸ್ತಕ, “The Paradoxical Prime Minister: Narendra Modi and his India”ವನ್ನು ಬಿಡುಗಡೆ ಮಾಡಿ ಮಾತನಾಡಿದ್ದ ಶಶಿ ತರೂರ್, “ನರೇಂದ್ರ ಮೋದಿ ಕುರಿತಂತೆ RSSನಲ್ಲೂ ಅಸಮಾಧಾನವಿದೆ. RSSನ ವ್ಯಕ್ತಿಯೊಬ್ಬರು ನನ್ನ ಬಳಿ ಮಾತನಾಡಿ, ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳಿದ್ದಂತೆ. ಅದನ್ನು ಕೈಯಿಂದ ತೆಗೆಯಲೂ ಆಗದು ಅಥವಾ ಚಪ್ಪಲಿಯಲ್ಲಿ ಹೊಡೆಯಲೂ ಆಗದು” ಎಂದು ಮಾತನಾಡಿದ್ದರು.
ಪ್ರಕರಣದ ಆಲಿಕೆಯನ್ನು ನವೆಂಬರ್ 16ಕ್ಕೆ ನಿಗದಿಪಡಿಸಲಾಗಿದೆ.
Comments are closed.