ಕರ್ನಾಟಕ

ಅಕ್ರಮ ಒತ್ತುವರಿ: ದೇವೇಗೌಡರ ಮೊಮ್ಮಕ್ಕಳಿಗೆ ನೋಟೀಸ್

Pinterest LinkedIn Tumblr


ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಗರಸಭೆ ವಾರ್ಡ್ ನಂಬರ್ ಒಂದರಲ್ಲಿರುವ ಪ್ರಜ್ವಲ್ ಮತ್ತು ಸೂರಜ್ ರೇವಣ್ಣರಿಗೆ ಸೇರಿದ ಕಟ್ಟಡಗಳ ಕೆಲ ಭಾಗಗಳನ್ನು ತೆರವುಗೊಳಿಸುವಂತೆ ಹಾಸನ ನಗರಸಭೆ ನೋಟೀಸ್ ಜಾರಿ ಮಾಡಿದೆ. ಸಿಎಂ ಸಹೋದರ, ಸಚಿವ ಹೆಚ್.ಡಿ. ರೇವಣ್ಣ ಅವರ ಇಬ್ಬರು ಪುತ್ರರಿಗೆ ನಗರಸಭೆಯಿಂದ ನೋಟೀಸ್ ನೀಡಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಹಾಸನ ನಗರಸಭೆಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಸೂಪರ್ ಸಿಎಂ ಹೆಚ್.ಡಿ. ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣಗೆ ನೋಟೀಸ್ ನೀಡಿದ್ದು, 7 ದಿನಗಳ ಒಳಗಾಗಿ ಕಟ್ಟಡ ತೆರವುಗೊಳಿಸುವಂತೆ ನೋಟೀಸ್​ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜ್ವಲ್ ಮತ್ತು ಸೂರಜ್ ಅವರಷ್ಟೇ ಅಲ್ಲ, ಹಾಸನ ನಗರ ವ್ಯಾಪ್ತಿಯಲ್ಲಿರವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವ ಒಟ್ಟು 40 ಮಂದಿ ನಗರಸಭೆಯು ನೋಟೀಸ್ ನೀಡಿದೆ. ಅಕ್ರಮ ರಸ್ತೆ ಒತ್ತುವರಿಗಳಿಂದಾಗಿ ಈ ಭಾಗದಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ ಇದೆ. ಅಕ್ರಮ ಕಟ್ಟಡ ತೆರವು ಮೂಲಕ ರಸ್ತೆ ಅಗಲೀಕರಣ ಮಾಡಲು ನಗರಸಭೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಿಂದ 6 ಮೀಟರ್​ನಷ್ಟು ಜಾಗವನ್ನು ತೆರವುಗೊಳಿಸಬೇಕೆಂದು ನಿರ್ದಿಷ್ಟ ಕಟ್ಟಡಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಐದು ವರ್ಷಗಳ ಹಿಂದೆ ಸಚಿವ ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ರೇವಣ್ಣರವರು ಈ ಕಟ್ಟಡವನ್ನು ಖರೀದಿಸಿದ್ದರು. ಇದು ನಗರಸಭೆ ವಾರ್ಡ್ ನಂಬರ್ 1 ರ ಆಸ್ತಿಸಂಖ್ಯೆ 644 ಮತ್ತು 630ಕ್ಕೆ ಸೇರಿದೆ.

Comments are closed.