ಕರಾವಳಿ

ಕಸಬಾ ಬೆಂಗರೆಯಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ : ಪೊಲೀಸರಿಂದ 20 ಲೋಡ್ ಮರಳು ವಶ

Pinterest LinkedIn Tumblr

ಮಂಗಳೂರು, ನವೆಂಬರ್ .03: ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗರೆಯಲ್ಲಿ ಅನಧಿಕೃತವಾಗಿ ದಾಸ್ತಾನಿರಿಸಿದ 20 ಲೋಡ್ ಮರಳನ್ನು ಪಣಂಬೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಮದ್ಯಾಹ್ನ 1-00 ಗಂಟೆಗೆ ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ ಗ್ರಾಮಕ್ಕೆ ಸಂಬಂಧಪಟ್ಟ ಬೀಟ್ ಅಧಿಕಾರಿಯಾದ ಪುರಂದರ ಗೌಡ ಎ.ಎಸ್.ಐ ಪಣಂಬೂರು ಠಾಣೆ ಮತ್ತು ಹೆಚ್.ಸಿ 608ನೇ ಶೈಲೆಂದ್ರ ರವರು ಬೀಟ್ ಕರ್ತವ್ಯದ ಬಗ್ಗೆ ತೆರಳಿದ ಸಂಧರ್ಭದಲ್ಲಿ ಕಸಬಾ ಬೆಂಗ್ರೆ ಗ್ರಾಮಕ್ಕೆ ಸಂಬಂಧಪಟ್ಟ ಅಕ್ಷಯ ಕಾರ್ಪೋರೇಶನ್ ಎಂಬ ಸ್ಥಳದಲ್ಲಿ ಅನದೀಕೃತವಾಗಿ ಅಂದಾಜು ಸುಮಾರು 20 ಲೋಡ್ ಮರಳನ್ನು ದಾಸ್ತಾನು ಇರಿಸಿದ್ದು, ಕಂಡು ಬಂದಿದೆ.

ಸ್ಥಳಕ್ಕೆ ಪಣಂಬೂರು ಠಾಣಾ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ. ಸೂಚನೆ ಮೇರೆಗೆ ದಾಳಿ ನಡೆಸಿದ ಪೊಲೀಸರು ಮರಳು ವಶಪಡಿಸಿಕೊಂಡು ಮುಂದಿನ ಕ್ರಮಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Comments are closed.