
ಖ್ಯಾತ ಸಿನಿಮಾ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಅನೇಕ ನಟಿಯರು #MeToo ಆರೋಪ ಮಾಡಿದ್ದರು. ‘ಲಿಪ್ಸ್ಟಿಕ್ ಅಂಡರ್ ಬುರ್ಖಾ’ ಚಿತ್ರದ ನಟಿ ಅಹಾನಾ ಕುಮ್ರಾ ಇದಕ್ಕೆ ಹೊಸ ಸೇರ್ಪಡೆ. ಸಾಜಿದ್ ಮನೆಗೆ ಕರೆದು ಬೇರೆ ರೀತಿಯಲ್ಲಿ ವರ್ತಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿರುವ ಅಹಾನಾ, ಸಾಜಿದ್ ಓರ್ವ ಕಪಟ ವ್ಯಕ್ತಿ ಎಂದು ದೂರಿದ್ದಾರೆ. ‘ವರ್ಷದ ಹಿಂದೆ ನಾನು ಸಾಜಿದ್ ಮನೆಗೆ ತೆರಳಿದ್ದೆ. ಈ ವೇಳೆ ಅವರು ನನ್ನನ್ನು ಕತ್ತಲೆ ಕೋಣೆಗೆ ಕರೆದುಕೊಂಡು ಹೋಗಿದ್ದರು. ನಾನು ಲೈಟ್ ಹಾಕಿ ಎಂದು ಹೇಳಿದ ಮೇಲೆ ಅವರು ಸ್ವಿಚ್ ಹಾಕಿದ್ದರು. ಅವರ ವರ್ತನೆಯಲ್ಲಿ ಏನೋ ಬದಲಾವಣೆ ಆಗಿದೆ ಅನಿಸಿತು. ಹಾಗಾಗಿ ನನ್ನ ತಾಯಿ ಪೊಲೀಸ್ ಅಧಿಕಾರಿ ಎನ್ನುವ ಸೂಚನೆ ನೀಡಿದ್ದೆ’ ಎಂದಿದ್ದಾರೆ.
ಇಷ್ಟಾದರೂ ಅವರು ವಿಲಕ್ಷಣ ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತಲೇ ಇದ್ದರಂತೆ. ‘ಒಂದೊಮ್ಮೆ ನಿನಗೆ ನಾನು 100 ಕೋಟಿ ರೂ. ಕೊಡುತ್ತೇನೆ ಎಂದರೆ ನಾಯಿಯ ಜತೆ ಲೈಂಗಿಕ ಕ್ರಿಯೆ ನಡೆಸಲು ನೀನು ಒಪ್ಪುತ್ತೀಯಾ ಎಂಬಿತ್ಯಾದಿ ಪ್ರಶ್ನೆಗಳನ್ನು ನನಗೆ ಕೇಳುತ್ತಿದ್ದರು. ಆದರೆ ಅವರು ನನ್ನನ್ನು ಟಚ್ ಮಾಡಿಲ್ಲ’ ಎಂದಿದ್ದಾರೆ ಅಹಾನಾ.
ಸಾಜಿದ್ ವಿರುದ್ಧ ಕೆಲ ನಾಯಕಿಯರು ಹಾಗೂ ಪತ್ರಕರ್ತೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಹಾಗಾಗಿ ‘ಹೌಸ್ಫುಲ್ 4’ ಚಿತ್ರ ಅವರ ಕೈ ತಪ್ಪಿದೆ.
Comments are closed.