
ಮಂಗಳುರು : ಅಖಂಡತೆಗೆ ಪ್ರತೀಕವಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಇದರ ವತಿಯಿಂದ ಬುಧವಾರ ನಡೆದ ಏಕತೆಗಾಗಿ ಓಟ ಕಾರ್ಯಕ್ರಮ ಕದ್ರಿಯಲ್ಲಿ ಉದ್ಘಾಟನೆಗೊಂಡು ಕರಾವಳಿ ಉತ್ಸವ ಗ್ರೌಂಡಿನಲ್ಲಿ ಸಮಾಪನಗೊಂಡಿತು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ ವೇದವ್ಯಾಸ ಕಾಮತ್, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಸಂತ ಜೆ ಪೂಜಾರಿ, ಪ್ರಸಾದ್ ಕುಮಾರ್, ರಮೇಶ್ ಕಂಡೆಟ್ಟು, ಭಾಸ್ಕರ ಚಂದ್ರ ಶೆಟ್ಟಿ, ನಂದನ ಮಲ್ಯ, ರೂಪಾ ಡಿ ಬಂಗೇರಾ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ ಕುಮಾರ್, ಜಗದೀಶ್ ಶೆಟ್ಟಿ, ರವೀಂದ್ರ ಕುಮಾರ್, ಕಾತ್ಯಾಯಿನಿ ರಾವ್, ಮೋಹನ್ ಆಚಾರ್ಯ, ಶ್ರೀನಿವಾಸ್ ಶೇಟ್, ಸಂಜಯ್ ಪ್ರಭು, ಡಾ| ಅಣ್ಣಯ್ಯ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
Comments are closed.