ಕರ್ನಾಟಕ

ನಾಯಿಮರಿಗೆ ರಾಜ್ಯ ಬಿಜೆಪಿ ನಾಯಕರ ಹೋಲಿಕೆ: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶಾಸಕ ಸಿ.ಟಿ. ರವಿ

Pinterest LinkedIn Tumblr


ಶಿವಮೊಗ್ಗ: ‘ಪ್ರಧಾನಿ ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ನಾಯಿಮರಿಗಳ ಹಾಗೆ ಇರುತ್ತಾರೆ. ಅಲ್ಲಿ ಇವರ ಆಟ ಏನೂ ನಡೆಯೋದಿಲ್ಲ. ಕೇಂದ್ರದಿಂದ ಒಂದೇ ಒಂದು ಯೋಜನೆಯನ್ನು ನಮ್ಮ ರಾಜ್ಯಕ್ಕೆ ತರಲಾಗದವರು ಇಲ್ಲಿ ಬಂದ ಕೂಡಲೆ ದೊಡ್ಡ ನಾಯಕರಂತೆ ವರ್ತಿಸುತ್ತಾರೆ’ ಎಂದು ಜಮಖಂಡಿಯ ಸಾವಳಗಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು.

ಇಂದು ಶಿವಮೊಗ್ಗದಲ್ಲಿ ನಡೆದ ಬೃಹತ್​ ಬಿಜೆಪಿ ಸಮಾವೇಶದಲ್ಲಿ ಅದಕ್ಕೆ ಉತ್ತರ ನೀಡಿರುವ ಶಾಸಕ ಸಿ.ಟಿ. ರವಿ, ‘ನಾವು ನಾಯಿಮರಿಗಳು ಎಂಬುದು ಸತ್ಯವಾದ ಮಾತು. ಆದರೆ, ನಾವು ದೇಶಕ್ಕಾಗಿ ನಿಯತ್ತಾಗಿರುವ ನಾಯಿಗಳು. ಕೆಲವರು ಹಿಂದುತ್ವ ಅನ್ನ ಕೊಡುವುದಿಲ್ಲ ಎನ್ನುತ್ತಾರೆ. ಆದರೆ, ನಾನು ಹಿಂದು ಅಲ್ಲ ಎಂದು ಹೇಳಿದವರೇ ಈಗ ಜನಿವಾರ ಹಾಕಿಕೊಂಡು ದೇವಾಲಯ ಸುತ್ತುತ್ತಿದ್ದಾರೆ. ಅವರಲ್ಲಿ ಇಂತಹ ಬದಲಾವಣೆ ಉಂಟುಮಾಡಿದ್ದು ಚುನಾವಣೆ ಮತ್ತು ಮತದಾರರು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಣ ಹಂಚಿ ಗೆಲ್ಲಬಹುದು ಎಂದು ಮೈತ್ರಿ ಸರ್ಕಾರ ಭಾವಿಸಿದೆ:

ಉಪಚುನಾವಣೆ ನಂತರ ರಾಜ್ಯ ರಾಜಕಾರಣವೇ ಬದಲಾಗುತ್ತದೆ. ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ಬಿಜೆಪಿ ಗೆಲುವು ಖಚಿತ. ಹಣ ಹಂಚಿ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಮೈತ್ರಿ ಸರ್ಕಾರ ಭಾವಿಸಿದೆ. ನನ್ನನ್ನು ಸೋಲಿಸಿದ್ದು ರಾಹು, ಕೇತು, ಶನಿ ಎಂದು ಹೇಳಿದ್ದ ಸಿದ್ದರಾಮಯ್ಯ ಆ ಮೂವರ ಪಕ್ಕದಲ್ಲೇ ಕುಳಿತುಕೊಂಡಿದ್ದರು. ಕೇಂದ್ರ ರೈತರ ಬೆಳೆಗೆ ಬೆಂಬಲ ಬೆಲೆ ಕೊಡಲು ತಯಾರಿದೆ. ರಾಜ್ಯ ಸರ್ಕಾರ ಖರೀದಿ ಮಾಡುವ ಕೆಲಸ ಮಾಡುತ್ತಿಲ್ಲ. ಶಾಸಕರಿಗೆ ಅಭಿವೃದ್ದಿಗೆ 2 ರೂಪಾಯಿ ಹಣ ನೀಡುತ್ತಿಲ್ಲ. ಇದರಿಂದ ಶಾಸಕರು ತಲೆ ಎತ್ತಿ ನಡೆಯಲು ಆಗುತ್ತಿಲ್ಲಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪಮೈತ್ರಿ ಸರ್ಕಾರವನ್ನು ಟೀಕಿಸಿದ್ದಾರೆ.

Comments are closed.