
ಸಂಪತ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅನುಕ್ತ’ ಚಿತ್ರದ ಟೀಸರ್ ಲಾಂಚ್ ಆಗಿದೆ. ಚಿತ್ರದ ಟೀಸರ್ ಕುತೂಹಲ ಕೆರಳಿಸಿದ್ದು, ರೀ ರೆಕಾರ್ಡಿಂಗ್ ಗಮನ ಸೆಳೆಯುತ್ತಿದೆ.
“ಅನುಕ್ತ’ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ನಾಯಕನಾಗಿ ಕಾರ್ತಿಕ್ ಅತ್ತಾವರ್ , ನಾಯಕಿಯಾಗಿ ಸಂಗೀತ ಭಟ್ ನಟಿಸಿದ್ದಾರೆ.



ಚಿತ್ರವನ್ನು ಅಶ್ವತ್ಥ್ ಸ್ಯಾಮ್ಯುಯೆಲ್ ನಿರ್ದೇಶಿಸಿದ್ದು, ಉಡುಪಿ ಮೂಲದ ದುಬೈ ಉದ್ಯಮಿ ಹರೀಶ್ ಬಂಗೇರ ದೇಯೀ ಪ್ರೊಡಕ್ಷನ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. “ಅನುಕ್ತ’ ಚಿತ್ರದ ಆಡಿಯೋವನ್ನು ದುಬೈನಲ್ಲಿ ಲಾಂಚ್ ಮಾಡಿ, ಕನ್ನಡ ಚಿತ್ರಗಳು ದುಬೈನಲ್ಲಿ ಕನ್ನಡಿಗರಿಗೆ ತಲುಪುವ ಹಾಗೇ ಮಾಡುವ ಅಲೋಚನೆ ಚಿತ್ರ ತಂಡದ್ದಾಗಿದೆ. ಈಗಾಗಲೇ ಆಡಿಯೋ ಲಾಂಚ್ಗಾಗಿ ಚಿತ್ರತಂಡ ಪ್ಲಾನ್ ಮಾಡಿದ್ದು, ಮುಂದಿನ ತಿಂಗಳು ಆಡಿಯೋ ರಿಲೀಸ್ ಮಾಡೋದು ಪಕ್ಕಾ ಅಂತ ನಿರ್ಮಾಪಕ ಹರೀಶ್ ಬಂಗೇರ ಹೇಳಿದ್ದಾರೆ.




ನೊಬಿನ ಪಾಲ್ ಸಂಗೀತ ಸಂಯೋಜನೆ, ಎನ್.ಎಮ್.ವಿಶ್ವ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು ತಾರಾಬಳಗದಲ್ಲಿ ಕಾರ್ತಿಕ್, ಸಂಗೀತ ಭಟ್, ಸಂಪತ್ ರಾಜ್, ಅನುಪ್ರಭಾಕರ್ ಮುಖರ್ಜಿ, ಕೆ.ಎಸ್.ಶ್ರೀಧರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
Comments are closed.