ಕರ್ನಾಟಕ

ದೇವರು ತಮ್ಮನ್ನು ಕಾಪಾಡುತ್ತಾನೆಂಬ ಮೂಡನಂಬಿಕೆಗೆ ಮೂವರು ಬಲಿ

Pinterest LinkedIn Tumblr


ಬೆಂಗಳೂರು: ಹೆಂಡತಿಯ ಮೇಲೆ ಬರುತ್ತಿದ್ದ ದೇವರು ತನ್ನನ್ನು ಕಾಪಾಡುತ್ತಾನೆ ಎಂದು ಕಾದು ಕುಳಿತ ಗಂಡ ಸಾವನ್ನಪ್ಪಿದ್ದು, ಆತನ ಸಾವಿನಿಂದಾಗಿ ಹೆಂಡತಿ ಹಾಗೂ ತಾಯಿಯೂ ಆತ್ಮಹತ್ಯೆಗೆ ಮುಂದಾಗುವ ಮೂಲಕ ಒಂದೇ ಕುಟುಂಬದ ಮೂವರು ಮೂಢನಂಬಿಕೆಗೆ ಶರಣಾಗಿದ್ದಾರೆ.

ಯಶವಂತಪುರದ ಮುತ್ಯಾಲನಗರದಲ್ಲಿ ವಾಸವಿದ್ದ ಶೇಷ ಶಯನ ಎಂಬಾಂತ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ. ಈತನ ಹೆಂಡತಿ ಮೇಲೆ ಪದೇ ಪದೇ ದೇವರು ಬರುತ್ತಿತ್ತು. ಈ ದೇವರು ತನಗೆ ಕಾಯಿಲೆ ಗುಣಮಾಡುತ್ತಾನೆ ಎಂದು ಈ ದಂಪತಿಗಳು ನಂಬಿ ಚಿಕಿತ್ಸೆಗಾಗಿ ಆಸ್ಪತ್ರೆಯ ಮುಖವನ್ನೇ ನೋಡಲಿಲ್ಲ.

ದಿನಕಳದಂತೆ ಪರಿಸ್ಥಿತಿ ಹದಗೆಟ್ಟು ಶೇಷಶಯನ ಮುಖ, ಕಾಲುಗಳು ಊದಿಕೊಳ್ಳಲು ಆರಂಭಿಸಿತು. ಈ ವೇಳೆ ಈತನ ಸಂಬಂಧಿಕರು ಆಸ್ಪತ್ರೆಗೆ ತೋರಿಸುವಂತೆ ಸಲಹೆ ನೀಡಿದ್ದಾರೆ. ಆದರೆ ದೇವರ ಮೇಲೆ ಅತಿಯಾದ ನಂಬಿಕೆ ಹೊಂದಿದ್ದ ಈ ದಂಪತಿ ನಿರ್ಲಕ್ಷ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ಹೆಂಡತಿಯ ಮೇಲೆ ದೇವರು ಬರುತ್ತಿರುವುದು ಕೂಡ ತನ್ನ ಕಾಯಿಲೆ ವಾಸಿ ಮಾಡಲು ಎಂದು ಇವರು ನಂಬಿದ್ದರು. ಇದರಿಂದ ದೇವರಿಗೆ ದಿನನಿತ್ಯ ಮನೆಯಲ್ಲಿ ನಿತ್ಯ ಪೂಜೆಗಳನ್ನು ಇವರು ಮಾಡುತ್ತಿದ್ದರು.

ಸತತ ಎರಡು ವರ್ಷಗಳಿಂದ ಇದೇ ರೀತಿ ವೈದ್ಯರ ಬಳಿ ತಪಾಸಣೆ ನಡೆಸದೆ ಕೊನೆಗೆ ಶೇಷಶಯನ ಸಕ್ಕರೆ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಈತನ ಸಾವಿನಿಂದ ಮನನೊಂದು ಮೃತದೇಹದ ಮುಂದೆಯೇ ಆತ್ಮಹತ್ಯೆ ಪತ್ನಿ ಉಷಾ ಹಾಗೂ ತಾಯಿ ಸುಧಾ ಕೂಡ ಮಾಡಿಕೊಂಡಿದ್ದಾರೆ.

Comments are closed.