
ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಇಮಾಮ್ ಉಲ್ ಹಖ್ ಭಾರತೀಯ ಪತ್ರಕರ್ತ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಸದ್ಯ ಭಾರೀ ವೈರಲ್ ಆಗುತ್ತಿದೆ.
ಪಾಕಿಸ್ತಾನ ತಂಡದ ಮಾಜಿ ಆಟಗಾರ ಇನ್ಜಾಮಾಮ್ ಉಲ್ ಹಖ್, ಇಮಾಮ್ ಉಲ್ರವರ ಚಿಕ್ಕಪ್ಪ. ಸದ್ಯ ಇಮಾಮ್ ತಮ್ಮ ಚಿಕ್ಕಪ್ಪನಂತೆಯೇ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಭಾರತೀಯ ಪತ್ರಕರ್ತನೊಬ್ಬ ಇಮಾಮ್ಗೆ, ‘ನಿಮ್ಮ ಚಿಕ್ಕಪ್ಪ ಇನ್ಜಾಮಾಮ್ ಉಲ್ ಹಖ್ ಹೆಚ್ಚಿನ ಸಮಯವನ್ನು ಮಲಗುವುದರಲ್ಲೇ ಕಳೆಯುತ್ತಿದ್ದರು, ನೀವು ಕೂಡ ಅವರಂತೆ ಹೆಚ್ಚು ಮಲಗುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಇಮಾಮ್, ‘ಈ ವಿಚಾರ ನಿಮಗೆ ಹೇಗೆ ಗೊತ್ತು, ನೀವೇನಾದ್ರು ಅವರ ಜೊತೆ ಮಲಗಿದ್ರಾ?’ ಎಂದು ಮರುಪ್ರಶ್ನೆ ಹಾಕಿ ಪತ್ರಕರ್ತನನ್ನು ಬೆಚ್ಚಿ ಬೀಳಿಸಿದ್ದಾರೆ. ಇವರ ಈ ಅನಿರೀಕ್ಷಿತ ಅವಾಲಿಗೆ ಉತ್ತರಿಸಲಾಗದೆ ಪತ್ರಕರ್ತ ಸುಮ್ಮನಾಗಿದ್ದಾರೆ.
ಇನ್ನು ಇದೇ ವೇಳೆ ಏಷ್ಯಾ ಕಪ್ ಟೂರ್ನಿ ಬಗ್ಗೆ ಮಾತನಾಡಿದ ಇಮಾಮ್, ಭಾರತ ಹಾಗೂ ಹಾಂಗ್ ಕಾಂಗ್ ನಡುವೆ ಪಂದ್ಯವನ್ನಾಡಲು ಉತ್ಸುಕನಾಗಿದ್ದೇನೆ. ಸರಿಯಾದ ಸಿದ್ಧತೆಯೊಂದಿಗೆ ಕಣಕ್ಕಿಳಿಯಲಿದ್ದೇವೆ ಎಂದೂ ತಿಳಿಸಿದ್ದಾರೆ.
Comments are closed.