ಮನೋರಂಜನೆ

ಸಲ್ಮಾನ್​ ಖಾನ್ ಗೆ ಮತ್ತೆ ಸಂಕಷ್ಟವಾದ ಕೃಷ್ಣಮೃಗ ಪ್ರಕರಣ

Pinterest LinkedIn Tumblr


ನವದೆಹಲಿ: ದೇಶದಲ್ಲಿಯೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್​​ ನಟರ ವಿರುದ್ಧದ ಕೃಷ್ಣಮೃಗ ಭೇಟೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಮುಖ ಆರೋಪಿ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ಸಹ​​ ನಟರ ವಿರುದ್ಧದ ಕೇಸ್​​ ಖುಲಾಸೆಗೊಳಿಸಿದ ಬಳಿಕವೂ ಸುದ್ದಿ ಮಾಡುತ್ತಿದೆ.

‘ಹಮ್ ಸಾಥ್ ಸಾಥ್ ಹೈ’ ಚಿತ್ರ ತಂಡದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಅವರು ಪ್ರಮುಖ ಆರೋಪಿಗಳು. ಸಲ್ಮಾನ್​ ಖಾನ್​​ ಕೃಷ್ಣಮೃಗ ಭೇಟೆಯಾಡುತ್ತಿದ್ದ ಸಂದರ್ಭದಲ್ಲಿಯಯೂ ಇವರೆಲ್ಲ ಹಾಜರಿದ್ದರು. ಹೀಗಾಗಿ ಸಲ್ಮಾನ್​​ ಖಾನ್​ ಸೇರಿದಂತೆ ಎಲ್ಲರ ವಿರುದ್ಧವೂ ಕೇಸ್​ ದಾಖಲಾಗಿದೆ.

ಐದು ತಿಂಗಳ ಹಿಂದೆ ಈ ಪ್ರಕರಣ ವಿಚಾರಣೆ ನಡೆಯಿತು. ಇವರೆಲ್ಲರ ವಿರುದ್ಧ ಸರಿಯಾದ ಸಾಕ್ಷಿ ಸಿಗಲಿಲ್ಲ ಎಂದು ಜೋಧಪುರ್ ನ್ಯಾಯಾಲಯ ನಟ ಮತ್ತು ನಟರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಮತ್ತೆ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

ಕೃಷ್ಣಮೃಗ ಪ್ರಕರಣ: 1998, ಅಕ್ಟೋಬರ್ 2ರಂದು ಜೋಧಪುರದಲ್ಲಿ “ಹಮ್ ಸಾಥ್ ಸಾಥ್ ಹೈಂ” ಹಿಂದಿ ಸಿನಿಮಾದ ಶೂಟಿಂಗ್ ವೇಳೆ ಈ ಪ್ರಕರಣ ನಡೆದಿದೆ. ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ಸೊನಾಲಿ ಬೇಂದ್ರೆ ಮತ್ತು ನೀಲಂ ಅವರು ಜೋಧಪುರ ಸಮೀಪದ ಕನಕಿಣಿ ಗ್ರಾಮಕ್ಕೆ ತೆರಳುತ್ತಾರೆ.

ಅಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಭೇಟಯಾಡುತ್ತಾರೆ. ಕಾಡುಪ್ರಾಣಿಗಳ ರಕ್ಷಣೆಗೆ ಕಟಿಬದ್ಧವಾಗಿದ್ದ ಬಿಷ್ಣೋಯ್ ಗ್ರಾಮಸ್ಥರ ಕಿವಿಗೆ ಗುಂಡಿನ ಶಬ್ದ ಬೀಳುತ್ತದೆ. ಕೂಡಲೇ ಅವರು ಸ್ಥಳಕ್ಕೆ ಧಾವಿಸುತ್ತಾರೆ. ಗ್ರಾಮಸ್ಥರನ್ನು ಕಂಡೊಡನೆಯೇ ಜಿಂಕೆ ಸಮೇತ ಜಿಪ್ಸಿ ಕಾರಿನಲ್ಲಿ ಸಲ್ಲು ಅಂಡ್ ಗ್ಯಾಂಡ್ ಪರಾರಿಯಾಗಲು ಯತ್ನಿಸುತ್ತದೆ.

ಆದರೂ ಗ್ರಾಮಸ್ಥರು ಚೇಸ್ ಮಾಡಲು ಯತ್ನಿಸುತ್ತಾರೆ. ಸ್ಥಳೀಯರು ತಮ್ಮನ್ನು ಬಿಡೋದಿಲ್ಲ ಎಂದು ಭಯಗೊಂಡ ಈ ತಂಡವು ಎರಡೂ ಜಿಂಕೆಯ ದೇಹಗಳನ್ನು ಬಿಸಾಡಿ ತಪ್ಪಿಸಿಕೊಂಡು ಹೋಗುತ್ತಾರೆ. ಸದ್ಯ, ಈ ಪ್ರಕರಣದಲ್ಲಿ ಬಿಷ್ಣೋಯ್ ಗ್ರಾಮಸ್ಥರೇ ಪ್ರಮುಖ ಸಾಕ್ಷಿಗಳಾಗಿದ್ದಾರೆ. ಒಟ್ಟು 52 ಸಾಕ್ಷಿಗಳು ಸಲ್ಲು ವಿರುದ್ಧ ನಿಂತಿವೆ.

ಬಳಿಕ ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಮತ್ತು IPC ಸೆಕ್ಷನ್ 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ.

ಸಲ್ಮಾನ್​ಗೆ ಜೈಲು: ಬಳಿಕ ಏಪ್ರಿಲ್ 05ರಂದು ನಡೆದ ವಿಚಾರಣೆಯಲ್ಲಿ ಕೋರ್ಟ್​ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಜೈಲುಶಿಕ್ಷೆ ಪ್ರಕಟಿಸುತ್ತದೆ. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ಬಳಿಕ ಸಲ್ಮಾನ್ ಖಾನ್​ ವಅರನ್ನು ಜಾಮೀನಿನ ಮೇಲೆ ಹೊರ ತರಲಾಗುತ್ತದೆ. ಉಳಿದ ನಟ, ನಟಿಯರನ್ನು ಜೋಧಪುರ್ ಕೋರ್ಟ್​​ ಪ್ರಕರಣದಿಂದ ಖುಲಾಸೆಗೊಳಿಸುತ್ತದೆ.

ಸದ್ಯ ಮತ್ತೆ ಪ್ರಕರಣ ಮುನ್ನೆಲೆಗೆ ಬಂದಿದೆ. ರಾಜಸ್ಥಾನ ಸರ್ಕಾರ ಹೈಕೋರ್ಟ್​ ಮೊರೆ ಹೋಗಿದ್ದು, ಸಲ್ಮಾನ್​​ ಖಾನ್​ ನೇತೃತ್ವದ ತಂಡಕ್ಕೆ ಸಂಕಷ್ಟ ಎದುರಾಗಿದೆ. ಜೋಧ್​​ಪುರ ಕೋರ್ಟ್​ನಂತೆಯೇ ಹೋಕೋರ್ಟ್​ ಪ್ರಕರಣ ಖುಲಾಸೆಗೊಳ್ಳುತ್ತಿದೆಯೇ ಅಥವಾ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತದೆಯೋ ಎಂದು ಕಾದು ನೋಡಬೇಕಿದೆ.

Comments are closed.