ಕರಾವಳಿ

ಕೋಟ: ರೈಸ್ ಮೀಲ್ ಮೇಲೆ ದಿಢೀರ್ ದಾಳಿ; 54 ಕ್ವಿಂಟಾಲ್ ರೇಶನ್ ಅಕ್ಕಿ ವಶ

Pinterest LinkedIn Tumblr

ಕುಂದಾಪುರ: ಅಕ್ರಮ ರೇಷನ್ ಅಕ್ಕಿ ಸಂಗ್ರಹಿಸಿದ ಮಾಹಿತಿ ಮೇರೆಗೆ ಸೋಮವಾರ ಕುಂದಾಪುರ ಎ.ಸಿ ಭೂಬಾಲನ್ ನೇತ್ರತ್ವದಲ್ಲಿ ಕೋಟ ಸಮೀಪ ಮಣೂರು ಖಾಸಗಿ ರೈಸ್ ಮೀಲ್ ಮೇಲೆ ದಿಢೀರ್ ದಾಳಿ ನಡೆಸಿ, ಅಪಾರ ಪ್ರಮಾಣಿದ ಅಕ್ಕಿ ಹಾಗೂ ಹಾಲಿನ ಪೌಡರ್ ಸೀಜ್ ಮಾಡಲಾಗಿದೆ.

ಮಣೂರು ಖಾಸಗಿ ರೈಸ್ ಮೀಲ್ ಸ್ಥಳೀಯ ವ್ಯಕ್ತಿಗಳಿಂದ ರೇಷನ್ ಅಕ್ಕಿ ಸಂಗ್ರಹಿಸಿತ್ತಿದ್ದ ಮಾಹಿತಿ ಉಡುಪಿ ಜಿಲ್ಲಾಧಿಕಾರಿಗಳಿ ಸಿಕ್ಕಿದ್ದು, ಜಿಲ್ಲಾಧಿಕಾರಿಪ್ರಿಯಾಂಕ ಮೇರಿ ಪ್ರಾನ್ಸಿಸ್ ನಿರ್ದೇಶನದ ಮೇಲೆ ಉಡುಪಿ ಆಹಾರ ಇಲಾಖೆ ಅಧಿಕಾರಿ ಎಂ.ವಿ.ಭಟ್ ಹಾಗೂ ಉಡುಪಿ ಫುಡ್ ಇನ್ಸ್‌ಪೆಕ್ಟರ್ ಪಾರ್ವತಿ ಹಾಗೂ ಬ್ರಹ್ಮಾವರ ತಹಸೀಲ್ದಾರ್ ಅನಿಲ್ ಕುಮಾರ್ ಮಧ್ಯಾಹ್ನ ದಾಲಿ ನಡೆಸಿ, ೫೪.೪೯ಕ್ವಿಂಟಾಲ್ ಅಕ್ಕಿ ೪೪ ಕೆಜಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ವಶಕ್ಕೆ ಪಡೆಯಲಾಗಿದೆ.

Comments are closed.