ಕರಾವಳಿ

ನಾಳೆ ಕಲ್ಕೂರ ಪ್ರತಿಷ್ಠಾನದಿಂದ ಶ್ರೀ ಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ – ಶ್ರೀಕೃಷ್ಣ ವೇಷ ಸ್ಪರ್ಧೆ

Pinterest LinkedIn Tumblr

ಮಂಗಳೂರು: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು‌ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರುವರೆ ದಶಕಗಳಿಂದ (34ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ-ಶ್ರೀ ಕೃಷ್ಣ ವೇಷ ಸ್ಪರ್ಧೆ”ಯನ್ನು ಕೃಷ್ಣಾಷ್ಟಮಿಯಂದು ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ‌ಏರ್ಪಡಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸೆಪ್ಟೆಂಬರ್ 02, ಭಾನುವಾರ ಕೃಷ್ಣಾಷ್ಟಮಿಯಂದು ಬೆಳಿಗ್ಗೆ 9.೦೦ರಿಂದ ಶ್ರೀ ಕೃಷ್ಣ ವರ್ಣ ವೈಭವ , ಶ್ರೀ ಕೃಷ್ಣ ಗಾನ ವೈಭವ, ಶ್ರೀ ಕೃಷ್ಣ ರಂಗೋಲಿ ನಡೆಯಲಿರುವುದು.

ಮಧ್ಯಾಹ್ನ 12ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಮತ್ತು ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಂಮುಖದಲ್ಲಿ ದೀಪ ಪ್ರಜ್ವಲನದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ರಾತ್ರಿ 12.೦೦ರತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 34 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ‌ಏಕ ಕಾಲದಲ್ಲಿ‌ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ 12 ರಿಂದರಾತ್ರಿ 12ರವರೆಗೆ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ ಎಂದು ಕಲ್ಕೂರ ತಿಳಿಸಿದರು.

ರಾತ್ರಿ 12 ಗಂಟೆಗೆ‌ ಅರ್ಘ್ಯ ಪ್ರದಾನ – ಪ್ರಸಾದ ವಿತರಣೆಯೊಂದಿಗೆ ಸಂಪನ್ನ :

ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳಲ್ಲಿ ಈ ಬಾರಿ ವಿಶೇಷವಾಗಿ ಶ್ರೀಕೃಷ್ಣ ಕಥಾಚಿತ್ರಾ ಸ್ಪರ್ಧೆ ಎಂಬ ಹೊಸ ವಿಭಾಗವನ್ನೂ ಒಳಗೊಂಡಂತೆ ಒಟ್ಟು೩೪ ವಿಭಾಗಗಳಲ್ಲಿ ಕದ್ರಿ ದೇವಳದ ಒಟ್ಟು‌ಆವರಣದಲ್ಲಿ, * ಶ್ರೀ ಮಹಾಗಣಪತಿದೇವಸ್ಥಾನ * ಅಭಿಷೇಕ ಮಂದಿರ * ಕದ್ರಿಕೆರೆ‌ಅಶ್ವತಕಟ್ಟೆ ಬಳಿ * ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ * ಅಭಿಷೇಕ ಮಂದಿರ ೧ನೇ ಮಹಡಿ * ಕಲ್ಯಾಣ ಮಂಟಪ * ಮಂಜುಶ್ರೀ * ಅಭಿಷೇಕ ಮಂದಿರ * ಪ್ರಧಾನ ವೇದಿಕೆ ಸಹಿತ‌ಏಕಕಾಲದಲ್ಲಿ ನಡೆಯಲಿದೆ.

ಕಂದ ಕೃಷ್ಣ : ವಿಭಾಗದಲ್ಲಿ 1 ವರ್ಷದ ಕೆಳಗಿನ ಪುಟಾಣಿ ಕಂದಮ್ಮಗಳು ಭಾಗವಹಿಸಬಹುದಾಗಿದ್ದು ಮುದ್ದು ಕಂದಮ್ಮಗಳ ಜೊತೆತಾಯಂದಿರುಕೂಡಾ ವೇದಿಕೆಗೆ ಬರಬಹುದು. ಸ್ಥಳ : ಶ್ರೀ ಕ್ಷೇತ್ರಕದ್ರಿ ದೇವಳದ ಶ್ರೀ ಮಂಜುಶ್ರೀ ಸಭಾಂಗಣದ ಬಳಿ (ಎಲ್ಲೂರು ಮನೆ)ಸಮಯ: 2ರಿಂದ ಮುದ್ದು ಕೃಷ್ಣ : ವಿಭಾಗದಲ್ಲಿ 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳು ಪಾಲ್ಗೊಳ್ಳಬಹುದಾಗಿದ್ದು, ಮುದ್ದು ಕಂದಮ್ಮಗಳ ಜೊತೆತಾಯಂದಿರುಕೂಡಾ ವೇದಿಕೆಗೆ ಬರಬಹುದು.

ಸ್ಥಳ: ಅಭಿಷೇಕ ಮಂದಿರದ ನೆಲ ಅಂತಸ್ತು.ಸಮಯ: 2 ರಿಂದ ತುಂಟ ಕೃಷ್ಣ : ವಿಭಾಗದಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಪುಟಾಣಿಗಳು ಭಾಗವಹಿಸಬಹುದು.

ಸ್ಥಳ:ಶ್ರೀ ಮಂಜುಶ್ರೀ ಸಭಾಂಗಣದ ಪಡುವೇದಿಕೆ. ಸಮಯ: 2 ರಿಂದ ಬಾಲಕೃಷ್ಣ : ವಿಭಾಗದಲ್ಲಿಬಾಲವಾಡಿ, ಅಂಗನವಾಡಿ, ಎಲ್.ಕೆ.ಜಿ. ಪುಟಾಣಿಗಳು ಭಾಗವಹಿಸಬಹುದಾಗಿದೆ.

ಸ್ಥಳ:ಅಭಿಷೇಕ ಮಂದಿರದ ಪ್ರಥಮ‌ ಅಂತಸ್ತು ಸಮಯ: ೨ ರಿಂದಕಿಶೋರ ಕೃಷ್ಣ : ವಿಭಾಗದಲ್ಲ್ಲಿಯು.ಕೆ.ಜಿ. ಮತ್ತು 1ನೇ ತರಗತಿ ಪುಟಾಣಿಗಳು ಪಾಲ್ಗೊಳ್ಳಬಹುದು . ಸ್ಥಳ:ಗೋಮುಖ ವೇದಿಕೆ (ಕದ್ರಿ ದೇವಳದ ಉತ್ತರ ಭಾಗ)ಸಮಯ: 2 ರಿಂದ ಶ್ರೀ ಕೃಷ್ಣ : ವಿಭಾಗದಲ್ಲಿ 2, 3, 4ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದೆ.

ಸ್ಥಳ:ಮಂಜಶ್ರೀ (ಮೂಡು ವೇದಿಕೆ), ಸಮಯ: 2 ರಿಂದ ಗೀತಾ ಕೃಷ್ಣ ವಿಭಾಗದಲ್ಲಿ (ವೇಷಭೂಷಣದೊಂದಿಗೆ ಗೀತೋಪದೇಶದಚಿತ್ರಣಗೀತೆಯಾವುದಾದರೂ ಶ್ಲೋಕದ ಪಠನದೊಂದಿಗೆ) 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.(3+2 ನಿಮಿಷ).

ಸ್ಥಳ:ಶ್ರೀ ಕ್ಷೇತ್ರಕದ್ರಿದೇವಿ ದೇವಸ್ಥಾನದ ಬಳಿಯ ಸಂಭಾಗಣಸಮಯ: 2 ರಿಂದ ಯಕ್ಷ ಕೃಷ್ಣ : ವಿಭಾಗದಲ್ಲಿಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವದೃಷ್ಟಿಯಿಂದಯಕ್ಷ ಕೃಷ್ಣ (ತೆಂಕುಯಾ ಬಡಗು) 10ನೇ ತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ. ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕಯಕ್ಷಗಾನ ವೇಷಭೂಷಣಧರಿಸಬೇಕಾಗುವುದು (ಗರಿಷ್ಠ 5 ನಿ.)

File Photo

ಸ್ಥಳ: ಗೋಮುಖ ವೇದಿಕೆ (ಕದ್ರಿ ದೇವಳದ ಉತ್ತರ ಭಾಗ)ಸಮಯ: 2 ರಿಂದ  ರಾಧಾಕೃಷ್ಣ : ವಿಭಾಗದಲ್ಲಿ 7ನೇ ತರಗತಿಯ ವರೆಗಿನ ಮಕ್ಕಳು ಭಾಗವಹಿಸಬಹುದಾಗಿದೆ.(ಜೋಡಿ) ಸ್ಥಳ :ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: 2 ರಿಂದ ಯಶೋದ ಕೃಷ್ಣ : ವಿಭಾಗದಲ್ಲಿಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗುಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು(ಕೃಷ್ಣ) 12 ವರ್ಷದೊಳಗಿನವರಾಗಿರ ಬೇಕು.

ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: ೩.೦೦ರಿಂದ  ಶಂಖನಾದ : (ಸಾಂಪ್ರದಾಯಿಕ‌ ಉಡುಗೆಯೊಂದಿಗೆ) : 7ನೇ ತರಗತಿವರೆಗಿನ ಮಕ್ಕಳಿಗಾಗಿ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು)

ಸ್ಥಳ :ಕದ್ರಿಕೆರೆ‌ಅಶ್ವಥಕಟ್ಟೆ ಬಳಿ. ಸಮಯ: 2 ರಿಂದ ಶಂಖ‌ಉದ್ಘೋಷ ಶಂಖನಿನಾದ :  (ಸಾಂಪ್ರದಾಯಿಕ‌ಉಡುಗೆಯೊಂದಿಗೆ) : 7ನೇ ತರಗತಿ ಮೇಲ್ಪಟ್ಟುಪಿ.ಯು.ಸಿ ವರೆಗೆ(ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

ಸ್ಥಳ :ಕದ್ರಿಕೆರೆ‌ಅಶ್ವಥಕಟ್ಟೆ ಬಳಿ. ಸಮಯ: 2 ರಿಂದ (ಸಾಂಪ್ರದಾಯಿಕ‌ಉಡುಗೆಯೊಂದಿಗೆ) :-ಪಿ.ಯು.ಸಿ ಮೇಲ್ಪಟ್ಟು ಮುಕ್ತ ವಿಭಾಗ(ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

ಸ್ಥಳ :ಕದ್ರಿಕೆರೆ‌ಅಶ್ವಥಕಟ್ಟೆ ಬಳಿ. ಸಮಯ: 2ರಿಂದ ದೇವಕಿ ಕೃಷ್ಣ : ಈ ಹಿಂದೆಕದ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರುದೇವಕಿಯಾಗಿ‌ಅಥವಾಯಶೋಧೆಯಾಗಿಭಾಗವಹಿಸಬಹುದಾಗಿದೆ. ಈ ಸ್ಪರ್ಧಾಳು ತಮ್ಮ ಮಗು ಅಥವಾಯಾವುದೇಕೃಷ್ಣವೇಷಧಾರಿ ಮಗುವಿನೊಂದಿಗೆ ಬರಬಹುದು.

ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: 2.30ರಿಂದ ವಸುದೇವಕೃಷ್ಣ (ಮುಕ್ತ ವಿಭಾಗ) : ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್‌ರಹಿತವಾದ ಯಾವುದೇ ಬೆತ್ತ‌ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರಾದಾಯಿಕ‌ಉಡುಗೆಯೊಂದಿಗೆಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ. (ಮಹಿಳೆಯರೂ ಪುರುಷ ವೇಷದೊಂದಿಗೆ ವಸುದೇವನಾಗಿಭಾಗವಹಿಸಬಹುದು.)

ಸ್ಥಳ: ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ : 4ರಿಂದ ನಂದಗೋಕುಲ (ಸಮೂಹ ವಿಭಾಗ) : ಸಾಮೂಹಿಕವಾಗಿ ಶ್ರೀ ಕೃಷ್ಣನ ಕಥಾನಕದಯಾವುದೇಸನ್ನಿವೇಶದ ಪ್ರದರ್ಶನವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ವಯೋಮಿತಿ ನಿರ್ಬಂಧವಿಲ್ಲ.

ಸ್ಥಳ :ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆ. ಸಮಯ: ೫.೦೦ರಿಂದ ಬಾಲಕೃಷ್ಣ ರಸಪ್ರಶ್ನೆ : 7ನೇ ತರಗತಿವರೆಗಿನ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ಸಮಯ: 6.30ರಿಂದ ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ : 7ನೇ ತರಗತಿ ಮೇಲ್ಪಟ್ಟ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದಮಕ್ಕಳುಭಾಗವಹಿಸಬಹುದು.)

ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ಸಮಯ: 6.30ರಿಂದ ಛಾಯಾಕೃಷ್ಣ : ದೇವಳದ ಪ್ರಾಂಗಣದ ನಿಗದಿತ ವೇದಿಕೆಯಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಛಾಯಾಚಿತ್ರಕ್ಕೆ‌ ಅನುಕೂಲಕರವಾಗಿ‌ ಆಕರ್ಷಕ ಭಂಗಿಯಲ್ಲಿ‌ಎಲ್ಲಾ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು. (ವಯೋಮಿತಿ ನಿರ್ಬಂಧವಿಲ್ಲ.)

ಶ್ರೀಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆ : ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 5 ವಿಭಾಗಗಳಲ್ಲಿ ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ, ಮುಕ್ತವಿಭಾಗ) ಪರಿಕರಗಳೊಂದಿಗೆ ಹಾಜರಿರಬೇಕು. ಸ್ಥಳ ಶ್ರೀ ಮಂಜುಶ್ರೀ ಸಭಾಂಗಣ .ಸಮಯ : ಬೆಳಿಗ್ಗೆ 9.೦೦ ರಿಂದ ಶ್ರೀಕೃಷ್ಣ ಗಾನ ವೈಭವ : ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟಜಾನಪದ, ಭಕ್ತಿಗೀತೆ, ಭಾವಗೀತೆಗಳ ಸಂಗೀತ ಸ್ಪರ್ಧೆ 4 ವಿಭಾಗಗಳಲ್ಲಿ ನಡೆಯುವುದು(ಶಿಶು, ಬಾಲ, ಕಿಶೋರ, ಮುಕ್ತ ವಿಭಾಗ-(ಪದವಿ ಪೂರ್ವಕಾಲೇಜು ಮೇಲ್ಪಟ್ಟು))

ಸ್ಥಳ : ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ಸ್ಥಳ : ಬೆಳಿಗ್ಗೆ ಗಂಟೆ 9.30ರಿಂದ  ರಂಗೋಲಿಯಲ್ಲಿ ಶ್ರೀ ಕೃಷ್ಟ್ಣ (ಸಾಂಪ್ರದಾಯಿಕ ಚುಕ್ಕಿ ರಂಗೋಲಿ) : ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ, 3 ವಿಭಾಗಗಳಲ್ಲಿ ನಡೆಯುವುದು. (ಬಾಲ, ಕಿಶೋರ, ಮುಕ್ತವಿಭಾಗ(ಪದವಿ ಪೂರ್ವಕಾಲೇಜು ಮೇಲ್ಪಟ್ಟು) ಪರಿಕರಗಳೊಂದಿಗೆ ಹಾಜರಿರಬೇಕು.

ಸ್ಥಳ : ಶ್ರೀ ಕೃಷ್ಣ ಕಲ್ಯಾಣ ಮಂಟಪಕದ್ರಿ ಮಲ್ಲಿಕಟ್ಟೆ ಸ್ಥಳ : ಬೆಳಿಗ್ಗೆ ಗಂಟೆ ೯.೩೦ರಿಂದ ರಂಗೋಲಿಯಲ್ಲಿ  ಶ್ರೀ ಕೃಷ್ಟ್ಣ (ಸರಳ ಕೈ ಶೈಲಿ ರಂಗೋಲಿ) : ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ, ೩ ವಿಭಾಗಗಳಲ್ಲಿ ನಡೆಯುವುದು. (ಬಾಲ, ಕಿಶೋರ, ಮುಕ್ತವಿಭಾಗ (ಪದವಿ ಪೂರ್ವಕಾಲೇಜು ಮೇಲ್ಪಟ್ಟು) ಪರಿಕರಗಳೊಂದಿಗೆ ಹಾಜರಿರಬೇಕು.

ಸ್ಥಳ : ಶ್ರೀ ಕೃಷ್ಣ ಕಲ್ಯಾಣ ಮಂಟಪಕದ್ರಿ ಮಲ್ಲಿಕಟ್ಟೆ ಸ್ಥಳ : ಬೆಳಿಗ್ಗೆ ಗಂಟೆ ೯.೩೦ರಿಂದಸ್ಪರ್ಧಾಳುಗಳೆಲ್ಲರಿಗೂ ಬಹುಮಾನ‌ಉಡುಗೊರೆ :ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ‌ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್‌ಭಗವದ್ಗೀತೆಯ ಪ್ರತಿಯನ್ನು‌ಆಕರ್ಷಕ ಬಟ್ಟೆಚೀಲದೊಂದಿಗೆ ನೀಡಲಾಗುವುದು.

ಬಹುಮಾನಗಳು :ಎಲ್ಲಾ ವಿಭಾಗದ ವಿಜೇತರಿಗೆ ಮೇಲ್ಕಾಣಿಸಿದ ಉಡುಗೊರೆಯಜೊತೆಗೆ ಪ್ರಥಮ, ದ್ವಿತೀಯ ಮತ್ತುತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಶೇಷ ಉಡುಗೊರೆಗಳನ್ನು ಸ್ಪರ್ಧಾ ಸ್ಥಳದಲ್ಲೇ ಭಾಗವಹಿಸಿದ ತಕ್ಷಣ ನೀಡುವುದಲ್ಲದೆ ಬಹುಮಾನಗಳನ್ನು ಆದೇ ದಿನ ಸಂಜೆಕ್ಷೇತ್ರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.

* ಅತೀ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ ವಿದ್ಯಾ ಸಂಸ್ಥೆಗೆ ಪಾರಿತೋಷಕ ನೀಡಲಾಗುವುದು.
* ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
* ಕೃಷ್ಣ ವೇಷಧಾರಿ ಪುಟಾಣಿಗಳ ಗ್ರೂಪ್ ಫೋಟೋ: ಮಧ್ಯಾಹ್ನ ೩.೩೦ಕ್ಕೆ ಪತ್ರಿಕೆ /ದೃಶ್ಯ ಮಾಧ್ಯಮಗಳಿಗೆ ವಿಶೇಷವಾಗಿ ಕಂದಮ್ಮಗಳಗ್ರೂಪ್ ಫೋಟೋತೆಗೆಯುವ ವ್ಯವಸ್ಥೆ ಶ್ರೀ ಕ್ಷೇತ್ರದ ದೀಪಸ್ತಂಭದ‌ಎದುರುಗಡೆ ಮಾಡಲಾಗಿದೆ.

ಎಲ್ಲಾ ಮಕ್ಕಳಿಗೆಬಿಸಿ ಹಾಲು / ಪೇಡ- ಐಸ್‌ಕ್ರೀಮ್ ಬಿಸಿ ಹಾಲು / ಪೇಡ- ಐಸ್‌ಕ್ರೀಮ್, ಚಾಕ್‌ಲೆಟ್ ಮಕ್ಕಳಿಗೆ ಮಾತ್ರ: ಈ ಮಕ್ಕಳ ಉತ್ಸವದಲ್ಲಿ ಸ್ಪರ್ಧಿಸುವ ಸ್ಪರ್ಧಾಳು ಮಕ್ಕಳಿಗೆ ನೀಡಲಾಗುವುದು.

*ಈ ವಿಶೇಷ ಉತ್ಸವದಲ್ಲಿ ಭಾಗವಹಿಸುವ ಅಸಕ್ತ ಅಂಗವಿಕಲ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುವುದು

ಈ ಬಾರಿಯ ವಿಶೇಷತೆ :

*ಒಟ್ಟು೩೪ವಿಭಾಗದಲ್ಲಿ ಏಕ ಕಾಲದಲ್ಲಿಕದ್ರಿ ದೇವಳದ ಒಟ್ಟು೯ ವೇದಿಕೆಗಳಲ್ಲಿ ಸ್ಪರ್ಧೆಗಳು ಜರಗಲಿವೆ.
* ಶ್ರೀ ಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನಾರ್ಥವಾಗಿ ಸುಮಾರು ೧೫೦ಕ್ಕೂ ಮಿಕ್ಕಿ ನಿತ್ಯ ಪೂಜಾ‌ಅಥವಾ ಸಾಂಸ್ಕೃತಿಕ ಪರಿಕರಗಳನ್ನು (ಶಂಖ, ಜಾಗಟೆ, ಬೆಳ್ಳಿ ತುಳಸಿ ಮಣಿ ಸರ, ಬೆಳ್ಳಿಕಟ್ಟಿದ ಅಭಿಷೇಕ ಶಂಖ, ಮುದ್ರೆ, ತಾಳ, ಆರತಿ, ದೀಪ ಇತ್ಯಾದಿ ನೀಡಲಾಗುವುದು.)
* ರಾತ್ರಿ ೧೨ ಗಂಟೆಗೆ ಶ್ರೀ ಕೃಷ್ಣ ದೇವರಿಗೆ ೧೨ ಬಗೆಯ ಉಂಡೆಗಳು, ಚಕ್ಕುಲಿ, ಕಡುಬು‌ಇನ್ನಿತರ ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದರೂಪವಾಗಿ‌ಉಂಡೆ ಚಕ್ಕುಲಿಗಳನ್ನು ವಿತರಿಸಲಾಗುವುದು. ಸಾರ್ವಜನಿಕರಿಗೂ‌ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
* ಪಾಲಕರುತಮ್ಮ ಮಕ್ಕಳಿಗೆ ಅವರವರ ಮನೆಗಳಲ್ಲೇ ಅಥವಾ‌ಇತರ ಕಡೆಗಳಲ್ಲಿ ವೇಷ ಭೂಷಣವನ್ನು ಹಾಕಿಸಿ ತರಬಹುದು‌ಅಥವಾ ಸ್ಥಳದಲ್ಲೇ ಅವರವರ ವೆಚ್ಚದಲ್ಲಿ ವೇಷವನ್ನು ಹಾಕಿಸ ಬಹುದಾಗಿದೆ.

ವೇಷಭೂಷಣಗಳಲ್ಲಿ ಆಡಂಬರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಮಕ್ಕಳ ಮುಗ್ದ ಸೌಂದರ್‍ಯದ ನೈಜತೆಯನ್ನು ಹೊರಸೂಸುವ ವೇಷಗಳನ್ನು ಧರಿಸಿಕೊಂಡಿರಲಿ ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

* ಖ್ಯಾತಛಾಯಾಗ್ರಾಹಕರು ಸ್ಥಳದಲ್ಲಿ ಹಾಜರಿದ್ದು‌ಆಸಕ್ತರುತಮ್ಮ ಮಕ್ಕಳ ವೈಯಕ್ತಿಕಛಾಯಾಚಿತ್ರವನ್ನು‌ಅವರವರ ಸ್ವಂತ ವೆಚ್ಚದಲ್ಲಿತೆಗೆಯುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಕಲ್ಕೂರ ಅವರು ವಿವರ ನೀಡಿದರು.

ಸುಮಾರು೩.೫ ದಶಕಗಳಿಂದ ವರ್ಷಂಪ್ರತಿ ನಡೆಯುತ್ತಿರುವ ಶ್ರೀ ಕೃಷ್ಣ ವೇಷ ಸ್ಪರ್ಧೆ‌ಇಂದುರಾಷ್ಟ್ರೀಯ ಮಕ್ಕಳ ಉತ್ಸವವಾಗಿ ಪರಿವರ್ತಿತವಾಗಿ ಸರ್ವರಿಂದಲೂ ಪ್ರಶಂಸಿಸಲ್ಪಟ್ಟಿದ್ದು ವಿವಿಧ ವಿಭಾಗಗಳಲ್ಲಿ ಸಾಮೂಹಿಕವಾಗಿ ಕೃಷ್ಣ ವೇಷ ಸ್ಪರ್ಧೆಯ ಮುಖೇನ ಮಕ್ಕಳ ಉತ್ಸವವನ್ನು‌ಆಚರಿಸುವ ಪದ್ದತಿ‌ ಇಂದು ಕರಾವಳಿಯ ಜಿಲ್ಲೆಯಾದ್ಯಂತ , ರಾಜ್ಯದಾದ್ಯಂತ ಹಾಗೂ ರಾಷ್ಟ್ರಾದ್ಯಂತ‌ಇದೇ ಮಾದರಿಯಲ್ಲಿ ನಡೆಯುತ್ತಿರುವುದು ಕಲ್ಕೂರ ಪ್ರತಿಷ್ಠಾನಕ್ಕೆ ಅತ್ಯಂತ ಸಂತಸದ ವಿಷಯ.

ಪ್ರಸ್ತುತರಾಷ್ಟ್ರೀಯ ಮಕ್ಕಳ ಉತ್ಸವವಾಗಿ ವಿಜೃಂಬಿಸುತ್ತಿದೆ. ಸ್ಪರ್ಧಾಳುಗಳು ಅವರ ಹೆತ್ತವರು ಸಮಯಕ್ಕೆ ಸರಿಯಾಗಿ ಆಗಮಿಸಿ ಇದರ ಯಶಸ್ವಿಗೆ ಸಹಕರಿಸಬೇಕೆಂದು ಕಲ್ಕೂರ ಅವರು ವಿನಂತಿಸಿಕೊಂಡಿದ್ದಾರೆ..

ಸ್ಫರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಲು‌ಅವಕಾಶವಿರುವುದು.ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಈ ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗೆ: ಕಲ್ಕೂರ ಪ್ರತಿಷ್ಠಾನ, ಶೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಫೋನ್:0824-2492239, 9448125949, 9845083736, ಇಮೇಲ್: kalkuraadvt@gmail.com, pradeep.kalkura@gmail.com ದಯಾನಂದಕಟೀಲ್, ಶಾರದಾ ವಿದ್ಯಾಲಯ, ಮಂಗಳೂರುಫೋನ್: 2493089/94485 45578, dayakateel1992@gmail.com, ಕದ್ರಿ ನವನೀತ ಶೆಟ್ಟಿ, ಫೋನ್: 2213061/94481 23061, ಜಾನ್‌ಚಂದ್ರನ್(9844284175) ಸುಧಾಕರರಾವ್ ಪೇಜಾವರ, ಫೋನ್: 2214093/2443360, ಗೋಕುಲ ಕೆ. ಫೋನ್: 2214176, 9448549456, ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫೋನ್: 2425059,, ಕದ್ರಿ ಶ್ರೀ ಮಂಜುನಾಥದೇವಸ್ಥಾನ ಫೋನ್: 2214176 ಇವರನ್ನು ಸಂಪರ್ಕಿಸಬಹುದು.

ಈ ವರ್ಷ ಮೂರು ಸಾವಿರಕ್ಕೂ ಮಿಕ್ಕಿ ಪುಟಾಣಿಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಿ‌ಎಲ್ಲಾ ನಾಗರಿಕ ಬಂಧುಗಳು, ಗಣ್ಯರು, ಆಡ್ಯ ಮಹನೀಯರು ಪಾಲ್ಗೊಂಡು ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಎಸ್. ಪ್ರದೀಪಕುಮಾರಕಲ್ಕೂರ ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕದ್ರಿ ನವನೀತ ಶೆಟ್ಟಿ, ದಯಾನಂದ ಕಟೀಲು, ರತ್ನಾಕರ ಜೈನ್, ವಿಜಯಲಕ್ಷ್ಮಿ ಬಿ. ಶೆಟ್ಟಿ, ಕೆ.ಎಸ್. ಕಲ್ಲೂರಾಯ, ಸುಧಾಕರರಾವ್ ಪೇಜಾವರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Comments are closed.