ಮನೋರಂಜನೆ

ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀಗೆ ಮತ್ತೆ ಕಿರುಕುಳ!

Pinterest LinkedIn Tumblr
Vijayalakshmi and actor Darshan 

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡಿ ಬಾಸ್​ ಎಂದೇ ಖ್ಯಾತಿ ಪಡೆದಿರುವ ಸ್ಟಾರ್​ ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀಗೆ ಫೇಸ್​ಬುಕ್​ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆ ನಡೆದಿದೆ.

ವಿಜಯಲಕ್ಷ್ಮಿ ಅವರ ಚಿತ್ರ ಹಾಗೂ ಅವರ ಕುಟುಂಬದ ಚಿತ್ರಗಳನ್ನು ಬಳಸಿಕೊಂಡು ಅವರ ಬಗ್ಗೆ ಕೀಳು ಮಟ್ಟದ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ದರ್ಶನ್​ ಜೊತೆಯಿರುವ ವಿಜಯಲಕ್ಷ್ಮೀ ಅವರ ಚಿತ್ರವನ್ನು ಬಳಸಿಕೊಂಡು ಅದಕ್ಕೆ ಆರೋಪಿ ತನ್ನ ಫೋಟೊ ಬಳಸಿಕೊಂಡು ಆಕೆ ತನ್ನ ಪತ್ನಿ ಎಂದು ಬರೆದುಕೊಂಡಿದ್ದಾನೆ.

ಅಷ್ಟೇ ಅಲ್ಲದೇ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ ನಕಲಿ ಖಾತೆ ತೆರದು ಅದನ್ನು ಅಸಲಿ ಖಾತೆ ಎಂಬಂತೆ ಬಿಂಬಿಸಿದ್ದಾನೆ. ಈ ಖಾತೆಯಲ್ಲಿ ಅವರ ಫೋಟೊ ಎಡಿಟ್​ ಮಾಡಿ ಅವರ ಫೊಟೊಗೆ “ನನ್ನ ಹೆಂಡತಿ”ಎಂದು ಟ್ಯಾಗ್ ಮಾಡಿದ್ದಾನೆ. ಈ ಮೂಲಕ ಅವರ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾನೆ ಎಂದು ವಿಜಯಲಕ್ಷಿ ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354(D), 354A(1)(iv), (505) (507) (420)ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಈ ಕುರಿತು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Comments are closed.