
ಮಂಗಳೂರು : ಮಂಗಳೂರಿನ ಪುರಭವನಕ್ಕೆ ದಲಿತ್ತೋದ್ಧಾರಕ ಶ್ರೀ ಕುದ್ಮುಲ್ ರಂಗರಾವ್ ಅವರ ಹೆಸರನ್ನು ಬುಧವಾರ ನಾಮಕರಣ ಮಾಡಲಾಯಿತು.


ಇಂದು ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ,ದೀನ ದಲಿತರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಕುದ್ಮುಲ್ ರಂಗರಾವ್ ಅವರ ಹೆಸರನ್ನು ನಾಮಕರಣ ಮಾಡಲಾಯಿತು. ಇನ್ನು ಮುಂದೆ ಮಂಗಳೂರಿನ ಟೌನ್ ಹಾಲ್ ಹೆಸರು ಕುದ್ಮುಲ್ ರಂಗರಾವ್ ಪುರಭವನ ಎಂದು ಹೆಸರಿಸಬೇಕು.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದ ಶುಭಾ ಹಾರೈಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ಮಂಗಳೂರು ಮೇಯರ್ ಭಾಸ್ಕರ್ ಮೊಯ್ಲಿ, ಉಪಮೇಯರ್ ಮೊಹಮ್ಮದ್, ಮನಪಾ ಅಯುಕ್ತ ಮೊಹಮ್ಮದ್ ನಝೀರ್, ಮನಪಾ ಮುಖ್ಯ ಸಚೇತಕ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ಮನಪಾ ಸದಸ್ಯರಾದ ಪ್ರಕಾಶ್ ಸಾಲಿಯಾನ್, ನವೀನ್ ಡಿಸೋಜ, ಪ್ರವೀಣ್ ಚಂದ್ರ ಆಳ್ವಾ, ಆಶೋಕ್ ಡಿ.ಕೆ, ಎ.ಸಿ.ವಿನಯರಾಜ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಕೋಡಿಕಲ್, ಸಂತೋಷ್ ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments are closed.