ಕರಾವಳಿ

ಕರ್ನಾಟಕ-ಕೇರಳದಲ್ಲಿ ಭಾರೀ ಮಳೆ : ಮಂಗಳೂರು ಸಂಪರ್ಕಿಸುವ ಹಲವು ರೈಲುಗಳ ಯಾನ ರದ್ದು

Pinterest LinkedIn Tumblr

ಮಂಗಳೂರು, ಆಗಸ್ಟ್.17: ಕರ್ನಾಟಕ, ಕೇರಳದಲ್ಲಿ ಭಾರೀ ಮಳೆ, ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಐದು ರೈಲುಗಳ ಯಾನ ರದ್ದಾಗಿವೆ. ಇದಲ್ಲದೆ ಇನ್ನೂ ಕೆಲವು ರೈಲುಗಳ ಸಂಚಾರ ಭಾಗಶಃ ರದ್ದುಗೊಳ್ಳುವ ಸಾಧ್ಯತೆಯಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.

ಮಂಗಳೂರು-ಚೆನ್ನೈ ಎಗ್ಮೋರೆ ಎಕ್ಸ್ ಪ್ರೆಸ್ ರೈಲಿನ (ಟ್ರೈನ್ ನಂ. 16860) ಇಂದಿನ ಯಾನ ಸಂಪೂರ್ಣ ರದ್ದಾಗಿದೆ. ಅದೇರೀತಿ ಮಂಗಳೂರು ಸೆಂಟ್ರಲ್ -ನಾಗರಕೊಯ್ಲ್ ಜಂಕ್ಷನ್ ನಡುವೆ ಸಂಚರಿಸಬೇಕಿದ್ದ ಎರ್ನಾಡ್ ಎಕ್ಸ್ ಪ್ರೆಸ್ ಟ್ರೈನ್(16605), ಮಂಗಳೂರು- ನಾಗರಕೊಯ್ಲ್ ಎಕ್ಸ್ ಪ್ರೆಸ್ ಟ್ರೈನ್(16649), ಮಂಗಳೂರಿನಿಂದ ಕೊಯಂಬತ್ತೂರ್ ನಡುವಿನ ಎಕ್ಸ್ ಪ್ರೆಸ್ ಟ್ರೈನ್(22609), ಕಣ್ಣೂರು- ತಿರುವನಂತಪುರಂ ಜನ ಶತಾಬ್ದಿ ಎಕ್ಸ್ ಪ್ರೆಸ್ ರೈಲು (12081) ಹಾಗೂ ಕಣ್ಣೂರು-ಅಲೆಪಿ ಎಕ್ಸ್ ಪ್ರೆಸ್ ರೈಲು (16308) ಯಾನವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು – ಸಂಭವ

ಹಝ್ರತ್ ನಿಝಾಮುದ್ದೀನ್-ತಿರುವನಂತಪುರಂ ರಾಜಧಾನಿ ಎಕ್ಸ್ ಪ್ರೆಸ್ ರೈಲು (12432) ಆ.14ರಂದು ದಿಲ್ಲಿಯ ಹಝ್ರತ್ ನಿಝಾಮುದ್ದೀನ್ ರೈಲು ನಿಲ್ದಾಣದಿಂದ ಯಾನ ಆರಂಭಿಸಿದ್ದು, ಕೋಝಿಕ್ಕೋಡ್ ವರೆಗೆ ಮಾತ್ರ ಸಂಚರಿಸುವ ಸಾಧ್ಯತೆ ಇದೆ. ಅದೇರೀತಿ ನಿಝಾಮುದ್ದೀನ್-ಎರ್ನಾಕುಲಂ ಎಕ್ಸ್ ಪ್ರೆಸ್ ಟ್ರೈನ್ (12618) ಕೋಝಿಕ್ಕೋಡ್ ವರೆಗೆ ಸಂಚರಿಸಿ ಮುಂದಿನ ಸಂಚಾರ ಭಾಗಶಃ ರದ್ದಾಗುವ ಸಾಧ್ಯತೆ ಇದೆ.

ಲೋಕಮಾನ್ಯ ತಿಲಕ್ ಟರ್ಮಿನಸ್ – ತಿರುವನಂತಪುರಂ ನೇತ್ರಾವತಿ ಎಕ್ಸ್ ಪ್ರೆಸ್ ರೈಲು(16545) ಸಂಚಾರ ಕೂಡಾ ಕೋಝಿಕ್ಕೋಡ್ ನಲ್ಲಿ ಭಾಗಶಃ ರದ್ದಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.

ಮಂಗಳೂರು ಸಂಪರ್ಕಿಸುವ ಹಲವು ರೈಲುಗಳ ಯಾನ ರದ್ದು 

1     Train No. 16860 Mangalore – Chennai Egmore Express of 17.08.2018 is fully cancelled.
2     Train No 16605 Mangalore Central  – Nagercoil Jn Ernad Express  of  17.08.2018  is fully cancelled.
3     Train No.16649 Mangalore – Nagercoil Express of 17.08.2018 is fully cancelled.
4     Train No. 22609 Mangalore – Coimbatore Express of 17.08.2018 is fully cancelled.
5     Train No 12081 Kannur – Triandrum Jan shabadhi Express of 17.08.2018 is fully cancelled.
6     Train No.16308 Kannur – Alleppey Express of 17.08.2018 is fully cancelled.
PRO:RAINS PARTIALLY CANCELLED
Train No.12432 Hazrat Nizamuddin-Thiruvananthapuram Rajdhani Express that left Hazrat Nizamuddin on 14th August may be short terminated at Kozhikkode.
Train No.12618 Nizamuddin – Erankulam Express may be short terminated at Kozhikkode on 17th August, 2018.
Train No  16345 Lokmanya Tilak Terminus  – Trivandrum  Netravathi Express may be short terminated at Kozhikkode on 17th August, 2018.
Train No 22149 Ernakulam – Pune Jn  Express started from Kozhikkode at 08.50 hrs., on 17th August, 2018.

Comments are closed.