ಮನೋರಂಜನೆ

60ನೇ ಬರ್ತ್‌ಡೇ ಸಂಭ್ರಮದಲ್ಲಿ ಮಡೋನಾ

Pinterest LinkedIn Tumblr


ಜಗತ್ತಿನೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಪಾಪ್‌ ಸೂಪರ್‌ಸ್ಟಾರ್‌ ಮಡೋನಾ ಆಗಸ್ಟ್‌ 16 ರಂದು ತಮ್ಮ 60 ನೇ ಬರ್ತ್‌ಡೇ ಆಚರಿಸಿಕೊಳ್ಳಲಿದ್ದಾರೆ. ಅತ್ಯದ್ಭುತ ಗಾಯನದ ಜೊತೆಗೆ ವಿಭಿನ್ನ ಲೈಫ್‌ಸ್ಟೈಲ್‌ ಮತ್ತು ರಿಲೇಷನ್‌ಶಿಪ್‌ ಮೂಲಕವೂ ಸದಾ ಸುದ್ದಿಯಲ್ಲಿರುವ ಅವರು 60ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳಲಿದ್ದಾರಂತೆ.

ಬರ್ತ್‌ಡೇ ಪ್ರಯುಕ್ತವಾಗಿ ಅವರು ನಿಧಿ ಸಂಗ್ರಹಿಸಿ ಅದನ್ನು ಮಲವಿಯ ಬಡ ಮಕ್ಕಳಿಗೆ ಕೊಡುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ತಮ್ಮ ಫೇಸ್‌ಬುಕ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು ತಮ್ಮ ಅಭಿಮಾನಿಗಳಿಗೆ ನಿಧಿ ಸಂಗ್ರಹಣೆ ಸಾಥ್‌ ನೀಡುವಂತೆ ಕೋರಿದ್ದಾರೆ. 60ರಲ್ಲೂ ಚಿರಯೌವ್ವನೆಯಂತೆ ಕಂಗೊಳಿಸುತ್ತಿರುವ ಮಡೋನಾರ ಬರ್ತ್‌ಡೇಗೆ ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಶುಭಾಶಯಗಳು ಬರಲಾರಂಭಿಸಿವೆ.

Comments are closed.