
ಮಂಗಳೂರು, ಆಗಸ್ಟ್.08: ಮಂಗಳೂರು-ಕಾಸರಗೋಡು ರಾ.ಹೆ.66ರ ಉಳ್ಳಾಲ ಸೇತುವೆಯಿಂದ ಬುಧವಾರ ಮಧ್ಯಾಹ್ನ ಸುಮಾರು 1:45ರ ಸುಮಾರಿಗೆ ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಟೀ ಶರ್ಟ್ ಧರಿಸಿದ್ದ ಮತ್ತು ಹೆಗಲಿಗೆ ಬ್ಯಾಗ್ ಹಾಕಿಕೊಂಡಿದ್ದ ಯುವಕನೊಬ್ಬ ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿದ್ದು, ಆತ ನದಿಗೆ ಹಾರಿರುವುದಾಗಿ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ತಿಳಿಸಿದ್ದಾರೆ,ಈ ಹಿನ್ನೆಲೆಯಲ್ಲಿ ಸೇತುವೆ ಮೇಲೆ ನೂರಾರು ವಾಹನ ಸವಾರರು ಜಮಾವಣೆಗೊಂಡಿದ್ದರು.
ಈ ಯುವಕ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಕಾಲೇಜು ವಿದ್ಯಾರ್ಥಿಯಂತೆ ಕಾಣುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ರೀತಿಯ ಘಟನೆ ನಡೆದಿರುವ ಬಗ್ಗೆ ಅಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಮಾಹಿತಿ ತಿಳಿಯಲು ಸಾರ್ವಜನಿಕರು, ವಾಹನಿಗರು ಸೇತುವೆಯಲ್ಲೇ ನಿಂತ ಕಾರಣ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಆಡಚಣೆಯುಂಟಾಯಿತು.
ಘಟನಾ ಸ್ಥಳಕ್ಕೆ ಕಂಕನಾಡಿ ಠಾಣಾ ಪೊಲೀಸರು ಅಗಮಿಸಿ ಪರೀಶಿಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.
Comments are closed.